November 11, 2020

119 ಸ್ಥಾನಗಳಲ್ಲಿ ಮಹಾಘಟಬಂಧನ್ ಅಭ್ಯರ್ಥಿಗಳು ಗೆದ್ದಿದ್ದರೂ, ದೃಢೀಕರಣ ಪತ್ರ ನೀಡುತ್ತಿಲ್ಲ : ಚುನಾವಣಾ ಆಯೋಗದ ವಿರುದ್ಧ ಆರ್ ಜೆಡಿ ಗಂಭೀರ ಆರೋಪ

ಪಾಟ್ನಾ : ತಮ್ಮ ಮೈತ್ರಿಕೂಟದ 119 ಅಭ್ಯರ್ಥಿಗಳು ಗೆದ್ದಿದ್ದರೂ, ಚುನಾವಣಾ ಆಯೋಗ ಪ್ರಮಾಣ ಪತ್ರ ನೀಡುತ್ತಿಲ್ಲ ಎಂದು ಟ್ವೀಟರ್ ನಲ್ಲಿ ಪಟ್ಟಿ ಬಿಡುಗಡೆ ಮಾಡಿ ಆರ್ ಜೆಡಿ ಗಂಭೀರ ಆರೋಪ ಮಾಡಿದೆ.

ಮಹಾಘಟಬಂಧನ್ 119 ಸ್ಥಾನಗಳಲ್ಲಿ ಗೆದ್ದಿದೆ. ಆದರೆ, ಟಿವಿಯಲ್ಲಿ 109 ಸ್ಥಾನ ತೋರಿಸಲಾಗುತ್ತಿದೆ. ನಿತೀಶ್ ಕುಮಾರ್ ಅಧಿಕಾರಿಗಳಿಗೆ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರ್ ಜೆಡಿ ಆಪಾದಿಸಿದೆ.
“ಮತ ಎಣಿಕೆ ಪೂರ್ಣಗೊಂಡ ಬಳಿಕ ಮಹಾಘಟಬಂಧನ್ ಅಭ್ಯರ್ಥಿಗಳು ಗೆದ್ದಿದ್ದಾರೆ ಎಂದು ತಿಳಿಸಲಾದ 119 ಸ್ಥಾನಗಳ ಪಟ್ಟಿ ಇದು. ಇವರೆಲ್ಲರಿಗೂ ಚುನಾವಣಾಧಿಕಾರಿಗಳು ಗೆಲುವಿನ ಅಭಿನಂದನೆ ಸಲ್ಲಿಸಿದ್ದಾರೆ, ಆದರೆ ಈಗ ದೃಢೀಕರಣ ಪತ್ರ ನೀಡುತ್ತಿಲ್ಲ, ನೀವು ಸೋತಿದ್ದೀರಿ ಎಂದು ಹೇಳುತ್ತಿದ್ದಾರೆ. ಚುನಾವಣಾ ಆಯೋಗದ ವೆಬ್ ಸೈಟ್ ಗಳಲ್ಲೂ ಇವರುಗಳು ಗೆದ್ದಿರುವುದನ್ನು ತೋರಿಸಲಾಗಿದೆ. ಪ್ರಜಾಪ್ರಭುತ್ವದಲ್ಲಿ ಇಂತಹ ಲೂಟಿ ನಡೆಯಲಾರದು’’ ಎಂದು ಆರ್ ಜೆಡಿ ಟ್ವೀಟ್ ಮಾಡಿದೆ.   

ಟಾಪ್ ಸುದ್ದಿಗಳು

ವಿಶೇಷ ವರದಿ