ಬಿಹಾರ ಫಲಿತಾಂಶ ಪ್ರಕಟ ತಡರಾತ್ರಿ ಆಗಬಹುದು : ಚುನಾವಣಾ ಆಯೋಗ

Prasthutha|

ಪಾಟ್ನಾ : ಬಿಹಾರ ವಿಧಾನಸಭಾ ಚುನಾವಣೆ ಫಲಿತಾಂಶ ಸಂಪೂರ್ಣ ಹೊರಬೀಳಲು ತಡ ರಾತ್ರಿ ಆಗಬಹುದು ಎಂದು ಚುನಾವಣಾ ಆಯೋಗ ತಿಳಿಸಿದೆ. ಮಧ್ಯಾಹ್ನ ಈ ಕುರಿತು ತುರ್ತು ಪತ್ರಿಕಾಗೋಷ್ಠಿ ನಡೆಸಿರುವ ಮುಖ್ಯ ಚುನಾವಣಾ ಆಯುಕ್ತ ಎಚ್.ಆರ್. ಶ್ರೀನಿವಾಸ್, ಫಲಿತಾಂಶ ಸಿಗಲು ತಡರಾತ್ರಿ ಆಗಬಹುದು ಎಂದು ತಿಳಿಸಿದ್ದಾರೆ.

- Advertisement -

ಕೋವಿಡ್ 19 ಮಾರ್ಗಸೂಚಿಗಳಿಗನ್ವಯ ಮತ ಎಣಿಕೆ ಕೇಂದ್ರಗಳನ್ನು ಹೆಚ್ಚಿಸಲಾಗಿದೆ. ಮತ ಎಣಿಕೆ ಸುತ್ತನ್ನೂ ಹೆಚ್ಚಿಸಲಾಗಿದೆ. ಹೀಗಾಗಿ ಮತ ಎಣಿಕೆ ಪ್ರಕ್ರಿಯೆ ಪೂರ್ಣಗೊಳ್ಳುವಾಗ ತಡವಾಗಬಹುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

4 ಕೋಟಿ 10 ಲಕ್ಷ ಮಂದಿ ಮತ ಚಲಾಯಿಸಿದ್ದಾರೆ. ಆದರೆ ಇಲ್ಲಿ ವರೆಗೆ ಶೇ.20ರಷ್ಟು ಮತಗಳಷ್ಟೇ ಎಣಿಕೆಯಾಗಿವೆ. ಅಂದರೆ, 95 ಲಕ್ಷದ ವರೆಗೆ ಮಾತ್ರ ಎಣಿಕೆಯಾಗಿವೆ ಎಂದು ಅವರು ಹೇಳಿದ್ದಾರೆ.

- Advertisement -

30-35 ಸುತ್ತಿನ ಮತ ಎಣಿಕೆ ನಡೆಯಲಿದೆ. ಸುಮಾರು 166 ಕ್ಷೇತ್ರಗಳಲ್ಲಿ ಮತಗಳ ಅಂತರ 5,000ಕ್ಕಿಂತಲೂ ಕಡಿಮೆಯಿದೆ ಎಂದು ಅವರು ಹೇಳಿದ್ದಾರೆ.

ಸದ್ಯಕ್ಕೆ ಸಿಕ್ಕಿರುವ ಮಾಹಿತಿಗಳ ಪ್ರಕಾರ, ಬಿಹಾರದಲ್ಲಿ ಜೆಡಿಯು ನೇತೃತ್ವ ಎನ್ ಡಿಎ 128 ಮತ್ತು ಆರ್ ಜೆಡಿ ನೇತೃತ್ವದ ಮಹಾಘಟ ಬಂಧನ್ 104 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಎಲ್ ಜೆಪಿ 2, ಬಿಎಸ್ ಪಿ 2, ಎಐಎಂಐಎಂ ಮೂರು ಸೀಟುಗಳಲ್ಲಿ ಮುನ್ನಡೆ ಸಾಧಿಸಿದೆ. ಇತರರು ನಾಲ್ಕು ಸೀಟುಗಳಲ್ಲಿ ಮುನ್ನಡೆಯಲ್ಲಿದ್ದಾರೆ. 166 ಕ್ಷೇತ್ರಗಳಲ್ಲಿ 5,000ಕ್ಕಿಂತಲೂ ಕಡಿಮೆ ಅಂತರದ ಮುನ್ನಡೆ ಇರುವುದರಿಂದ ಯಾವ ಕ್ಷಣದಲ್ಲಾದರೂ, ಅಂತಿಮ ಫಲಿತಾಂಶದಲ್ಲಿ ಮಹತ್ವದ ಬದಲಾವಣೆಗಳಾಗುವ ನಿರೀಕ್ಷೆಯಿದೆ.

Join Whatsapp