ಕೃಷಿ ಮಸೂದೆ । ಪಾರ್ಕಿನಲ್ಲಿ ನಕಲಿ ರೈತರ ಸಂದರ್ಶನ । ನಗೆಪಾಟಲಿಗೀಡಾದ ಉ.ಪ್ರ ANI !

Prasthutha|

ನರೇಂದ್ರ ಮೋದಿ ನೇತೃತ್ವದ ಸರಕಾರ ಜಾರಿಗೆ ತಂದಿರುವ ನೂತನ ಕೃಷಿ ಮಸೂದೆಯನ್ನು ವಿರೋಧಿಸಿ ದೇಶದಾದ್ಯಂತ ರೈತರು ಪ್ರತಿಭಟಿಸುತ್ತಿದ್ದಾರೆ. ಈ ಮಧ್ಯೆ ಉತ್ತರ ಪ್ರದೇಶದ ANI ಸುದ್ದಿ ಸಂಸ್ಥೆಯು, ಕೃಷಿ ಮಸೂದೆಗೆ ರೈತರು ಬೆಂಬಲಿಸುತ್ತಿದ್ದಾರೆ ಎಂದು ಬಿಂಬಿಸಲು ನಕಲಿ ರೈತರ ನಕಲಿ ಸಂದರ್ಶನ ನಡೆಸಿ ನಗೆಪಾಟಲಿಗೀಡಾಗಿದೆ. ANI ಸುದ್ದಿ ಸಂಸ್ಥೆಯು ಕಾನ್ಪುರದಲ್ಲಿ ನಾಲ್ಕು ಜನ ರೈತರನ್ನು ಸಂದರ್ಶನ ನಡೆಸಿದ ಫೋಟೊ ಹಾಕಿದ್ದು, ಅದರಲ್ಲಿ ಅವರು ಮಸೂದೆಯನ್ನು ಸ್ವಾಗತಿಸಿದ್ದಾರೆ ಎಂದು  ಟ್ವೀಟ್ ಮಾಡಿತ್ತು.

- Advertisement -

ಈ ಫೋಟೋ ಮತ್ತು ಅದರಲ್ಲಿರುವ ರೈತರ ಅಸಲಿತನದ ಕುರಿತು ಹಲವರು ಮಾಹಿತಿ ಹೊರ ಹಾಕಿದ್ದು, ಆ ನಾಲ್ವರು ಕಾನ್ಪುರದ ಬೇರೆ ಬೇರೆ ಪ್ರದೇಶದ ರೈತರಲ್ಲಿ ಬದಲಾಗಿ, ಅವರೆಲ್ಲರೂ ಪಾರ್ಕ್ ನಂತೆ ಕಾಣುವ ಒಂದೇ ಸ್ಥಳದಲ್ಲಿ ಕೂತು ಫೋಟೊ ತೆಗೆಸಿದ್ದಾರೆ ಎಂದು ಪುರಾವೆ ಸಹಿತ ಮಾರ್ಕ್ ಮಾಡಿ ಟ್ವೀಟ್ ಮಾಡಿದ್ದಾರೆ.  ಅಂತರ್ಜಾಲ ಸತ್ಯಶೋಧನಾ ತಾಣ ಸಂಸ್ಥೆ ‘ಆಲ್ಟ್ ನ್ಯೂಸ್’ ನ ಮುಖ್ಯಸ್ಥರಾಗಿರುವ ಪ್ರತೀಕ್ ಸಿನ್ಹಾ ಕೂಡಾ ಈ ಕುರಿತು ಟ್ವೀಟ್ ಮಾಡಿದ್ದಾರೆ.

ಈ ನಾಲ್ವರು ರೈತರಂತೆ ಪೋಸ್ ಕೊಟ್ಟಿರುವ ಫೋಟೊದ ಹಿನ್ನೆಲೆ ನೋಡಿದರೆ ಅದೊಂದು ಕೃಷಿ ಜಮೀನಿನಂತೆ ಕಾಣುತ್ತಿಲ್ಲ. ಬದಲಾಗಿ ಅದಕ್ಕೆ ಗೇಟ್ ಹಾಕಲಾಗಿದ್ದು, ಸರಪಳಿಗಳಿಂದ ಆವೃತವಾದ ತಡೆಗೋಡೆಗಳೂ ಕಾಣುತ್ತಿದೆ.  ಜನರು ವಾಯುವಿಹಾರಕ್ಕೆ ಬಳಸುವ ಕಾಂಕ್ರಿಟ್ ರಸ್ತೆ ಕೂಡಾ ಅಲ್ಲಿ ಗೋಚರಿಸುತ್ತಿದೆ. ಒಂದು ಕೃಷಿ ಜಮೀನಿನಲ್ಲಿ ಪಾರ್ಕಿನಲ್ಲಿರುವ ಈ ಎಲ್ಲಾ ವ್ಯವಸ್ಥೆಗಳು ಇರಲು ಸಾಧ್ಯವೇ ಎಂದು ಜನರು ವ್ಯಂಗ್ಯವಾಡಿದ್ದಾರೆ.    ಇದು ಮಾತ್ರವಲ್ಲದೆ ಫೋಟೋದಲ್ಲಿರುವ ಒಬ್ಬ ಈ ಹಿಂದೆ ನೋಟ್ ಬ್ಯಾನ್ ಆದಾಗಲೂ ಮೋದಿ ಸರ್ಕಾರದ ನಿರ್ಧಾರವನ್ನು ಸಮರ್ಥಿಸುವ ಓರ್ವ ಚಾ ಮಾರುವವನ ವೇಷ ಧರಿಸಿ ಸಂದರ್ಶನ ನಡೆಸುವ ಟ್ವೀಟನ್ನು ಕೂಡಾ ಟ್ವಿಟ್ಟರಿಗರು ಉಲ್ಲೇಖಿಸಿದ್ದಾರೆ.  

- Advertisement -

ANI ಸುದ್ದಿ ಸಂಸ್ಥೆಯು ಹಲವು ಮಾಧ್ಯಮಗಳಿಗೆ ಅಧಿಕೃತ ಸುದ್ದಿಗಳನ್ನು ನೀಡುವ ಸಂಸ್ಥೆಯಾಗಿದ್ದು, ಅಂತಹಾ ಸಂಸ್ಥೆಯೇಈ ರೀತಿ ಮಾಡಿದರೆ ಉಳಿದ ಮಾಧ್ಯಮಗಳ ಪರಿಸ್ಥಿತಿ ಹೇಗಿರಬಹುದು ಎಂದು ಸಾಮಾಜಿಕ ತಾಣಗಳಲ್ಲಿ ಜನರಾಡಿಕೊಳ್ಳುತ್ತಿದ್ದಾರೆ.

ಟ್ವಿಟ್ಟರಿನಲ್ಲಿ ಸುದ್ದಿ ಸಂಸ್ಥೆಯನ್ನು ಟ್ರೋಲ್ ಮಾಡಿ ಹಾಕಿರುವ ಕೆಲವೊಂದು ಟ್ವೀಟ್ ಗಳು:

Join Whatsapp