ಹಾಥರಸ್ ಸಾಮೂಹಿಕ ಅತ್ಯಾಚಾರ ಪ್ರಕರಣ | ತನ್ನ ವೆಬ್ ಸೈಟ್ ನಿಂದ ಎಫ್.ಐ.ಆರ್. ತೆಗೆದು ಹಾಕಿದ ಸಿಬಿಐ

Prasthutha|

ಹಾಥರಸ್ ದಲಿತ ಮಹಿಳೆಯ ಸಾಮೂಹಿಕ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ಎಫ್.ಐ.ಆರ್ ಮತ್ತು ತನಿಖೆಯ ಹೊಣೆ ವಹಿಸಿಕೊಳ್ಳುವ ಕುರಿತಾದ ಪತ್ರಿಕಾ ಪ್ರಕಟನೆಯನ್ನು ಪೋಸ್ಟ್ ಮಾಡಿದ ಗಂಟೆಗೊಳಗಾಗಿ ಸಿಬಿಐ ಅದನ್ನು ತನ್ನ ವೆಬ್ ಸೈಟ್ ನಿಂದ ತೆಗೆದುಹಾಕಿದೆ.

- Advertisement -

ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಪ್ರಕರಣದ ತನಿಖೆಗಾಗಿ ಅಧಿಕೃತ ಪಡಿಸುವ ಅಧಿಸೂಚನೆಯೊಂದನ್ನು ಹೊರಡಿಸಿದ ಬಳಿಕ ಸಿಬಿಐ ಈ ಪ್ರಕರಣವನ್ನು ಔಪಚಾರಿಕವಾಗಿ ಕೈಗೆತ್ತಿಕೊಂಡಿತ್ತು ಮತ್ತು ಸೆಕ್ಷನ್ 307 (ಕೊಲೆ ಯತ್ನ) 376 (ಡಿ) (ಸಾಮೂಹಿಕ ಅತ್ಯಾಚಾರ), ಮತ್ತು ಐಪಿಸಿಯ 302 (ಕೊಲೆ) ಮತ್ತು ಎಸ್‌ಸಿ / ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆ 1989 ರ ಸೆಕ್ಷನ್ 3 (2) (ವಿ) ಅಡಿಯಲ್ಲಿ ರವಿವಾರ ಎಫ್.ಐ.ಆರ್ ದಾಖಲಿಸಿತ್ತು.

ಸಿಬಿಐನ ಗಾಝಿಯಾಬಾದ್ ಘಟಕದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ವು ಈ ಪ್ರಕರಣದಲ್ಲಿ “ಅತ್ಯಾಚಾರ, ಕೊಲೆ ಯತ್ನ, ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ (ಇತರ)” ಶಂಕಿತ ಅಪರಾಧಗಳೆಂದು ಉಲ್ಲೇಖಿಸಿತ್ತು. ಈ ಎಫ್ಐಆರ್ ಮತ್ತು ಪತ್ರಿಕಾ ಪ್ರಕಟನೆಯನ್ನು ಏಜೆನ್ಸಿಯ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿತ್ತು.

- Advertisement -

ಆದರೆ  ನಂತರ ಎಫ್ಐಆರ್ ಅನ್ನು ತೆಗೆದುಹಾಕಲಾಗಿದ್ದು, ಮಧ್ಯಾಹ್ನದ ವೇಳೆ ಹೊಸ ಪ್ರಕಟನೆಯನ್ನು ಪೋಸ್ಟ್ ಮಾಡಲಾಗಿದೆ. “ಉತ್ತರ ಪ್ರದೇಶದ ಹಥ್ರಾಸ್ ಜಿಲ್ಲೆಯ ಚಂಡ್ಪ ಪೊಲೀಸ್ ಠಾಣೆಯಲ್ಲಿ ದಾಖಲಾದ ಅಪರಾಧ ಸಂಖ್ಯೆ 136/2020ರ ಪ್ರಕರಣವನ್ನು ಏಜೆನ್ಸಿಯು ಎತ್ತಿಕೊಂಡಿದ್ದು, ಆರೋಪಿಯ ವಿರುದ್ಧ ಪ್ರಕರಣವನ್ನು ದಾಖಲಿಸಿದೆ. ದೂರುದಾರರ ಪ್ರಕಾರ, ಆರೋಪಿಯು ದಿನಾಂಕ 14-09-2020ರಂದು ರಾಗಿ ಹೊಲದಲ್ಲಿ ದೂರುದಾರನ ಸಹೋದರಿಯ ಕತ್ತು ಹಿಸುಕಲು ಪ್ರಯತ್ನಿಸಿದ್ದ. ಉತ್ತರ ಪ್ರದೇಶ ಸರಕಾರ ಮತ್ತು ನಂತರದಲ್ಲಿ ಭಾರತದ ಸರಕಾದ ಕೋರಿಕೆಯ ಮೇರೆಗೆ ಸಿಬಿಐ ಕೇಸು ದಾಖಲಿಸಿದೆ” ಎಂದು ಹೊಸ ಪ್ರಕಟನೆಯಲ್ಲಿ ಉಲ್ಲೇಖಿಸಲಾಗಿದೆ.

Join Whatsapp