ಸಿಎಂ ಮಗ ವಿಜಯೇಂದ್ರ ವಿರುದ್ಧ ಬಿಜೆಪಿ ಶಾಸಕರಿಂದಲೇ 5 ಸಾವಿರ ಕೋಟಿ ರೂ. ಭ್ರಷ್ಟಾಚಾರದ ಆರೋಪ? | ಕಾಂಗ್ರೆಸ್ ನಿಂದ ಪತ್ರ ಬಿಡುಗಡೆ

Prasthutha|

ಮೈಸೂರು : ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮಗ ಬಿ.ವೈ. ವಿಜಯೇಂದ್ರ ವಿರುದ್ಧ ರೂ. 5000 ಕೋಟಿ ಭ್ರಷ್ಟಾಚಾರ ಆರೋಪ ಕೇಳಿಬಂದಿದೆ. ಬಿಜೆಪಿ ಶಾಸಕರೇ ಈ ಬಗ್ಗೆ ಪಕ್ಷದ ಹೈಕಮಾಂಡ್ ಗೆ ದೂರು ನೀಡಿದ್ದಾರೆನ್ನಲಾದ ಪತ್ರವೊಂದನ್ನು ಕಾಂಗ್ರೆಸ್ ಬಿಡುಗಡೆಗೊಳಿಸಿದೆ. ಈ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ ಎಂದು ‘ನ್ಯೂಸ್18ಕನ್ನಡ’ ವರದಿ ಮಾಡಿದೆ.

- Advertisement -

ಬಿಜೆಪಿಯನ್ನು ಉಳಿಸಿ ಅಂತ ಪಕ್ಷದ ಹೈಕಮಾಂಡ್ ಗೆ ಸ್ವತಃ ಅದೇ ಪಕ್ಷದ ಶಾಸಕರು ಪತ್ರ ಬರೆದಿದ್ದಾರೆ ಎನ್ನಲಾದ ಪತ್ರವನ್ನು ಮೈಸೂರಿನಲ್ಲಿ ಕಾಂಗ್ರೆಸ್ ವಕ್ತಾರ ಲಕ್ಷ್ಮಣ ಬಿಡುಗಡೆಗೊಳಿಸಿದ್ದಾರೆ. ವಿಜಯೇಂದ್ರ 31 ಜನರ ಕೂಟವನ್ನು ರಚಿಸಿಕೊಂಡಿದ್ದಾರೆ. ಇಲಾಖೆಗಳಿಗೆ ಉಸ್ತುವಾರಿಗಳನ್ನು ಮಾಡಿಕೊಂಡಿದ್ದಾರೆ. ಇವರ ಹೆಸರುಗಳನ್ನು ಬಿಡುಗಡೆ ಮಾಡಲಾಗುವುದು. ಸಿಎಂ ಪುತ್ರ ವಿಜಯೇಂದ್ರ ಕಳೆದ ಒಂದು ವರ್ಷದಲ್ಲಿ 5000 ಕೋಟಿ ರೂ. ಸಂಗ್ರಹ ಮಾಡಿದ್ದಾರೆ ಎಂದು ಲಕ್ಷ್ಮಣ ಆರೋಪಿಸಿದ್ದಾರೆ.

ವಿಜಯೇಂದ್ರ ಬೇನಾಮಿ ಆಸ್ತಿ ಮಾಡಿದ್ದಾರೆ ಎಂದೂ ಅವರು ಆಪಾದಿಸಿದ್ದಾರೆ. ವಿಜಯೇಂದ್ರ ಯಾರ್ಯಾರ ಹೆಸರಲ್ಲಿ ಆಸ್ತಿ ಮಾಡಿದ್ದಾರೆ. ಕರ್ನಾಟಕ ಮತ್ತು ಬೇರೆ ರಾಜ್ಯಗಳಲ್ಲಿ ಎಲ್ಲೆಲ್ಲಿ ಅವರ ಹೆಸರಿನ ಆಸ್ತಿಗಳಿವೆ ಎಂಬುದರ ದಾಖಲೆಗಳನ್ನು ಬಿಡುಗಡೆ ಮಾಡಲಾಗುತ್ತದೆ. ಸರ್ಕಾರ 5 ಸಾವಿರ ಕೋಟಿ ರು. ಭ್ರಷ್ಟಾಚಾರ ನಡೆಸಿರುವ ಬಗ್ಗೆ 10 ದಿನಗಳಲ್ಲಿ ತನಿಖೆಗೆ ಆದೇಶಿಸದಿದ್ದಲ್ಲಿ, ನಮ್ಮಲ್ಲಿರುವ ದಾಖಲೆಗಳ ಆಧಾರದಲ್ಲಿ ಎಸಿಬಿ, ಲೋಕಾಯುಕ್ತ, ಸಿಬಿಐ, ಹೈಕೋರ್ಟ್ ಮೂಲಕ ತನಿಖೆಗೆ ಕ್ರಮ ವಹಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಭ್ರಷ್ಟಾಚಾರಕ್ಕೆ ಸಂಬಂಧಪಟ್ಟ ಆಡಿಯೊ ಕ್ಲಿಪ್ಪಿಂಗ್, ವೀಡಿಯೊ ಕ್ಲಿಪ್ಪಿಂಗ್ ಸೆಪ್ಟಂಬರ್ ತಿಂಗಳಲ್ಲಿ ಬಿಡುಗಡೆ ಮಾಡಲಿದ್ದೇವೆ ಎಂದು ಕಾಂಗ್ರೆಸ್ ತಿಳಿಸಿದೆ.   

- Advertisement -

    

Join Whatsapp