ಸಾಮೂಹಿಕ ಅತ್ಯಾಚಾರ ಪ್ರಕರಣಗಳಲ್ಲಿ ಮರಣದಂಡನೆ ವಿಧಿಸುವಂತೆ ಕೋರಿದ ಕರ್ನಾಟಕ ಹೈಕೋರ್ಟ್

Prasthutha|


ಕೊಲೆ ಮಾಡುವುದಕ್ಕಿಂತ ದೊಡ್ಡ ಕ್ರೌರ್ಯವಾಗಿದೆ ಸಾಮೂಹಿಕ ಅತ್ಯಾಚಾರ. ಅತ್ಯಾಚಾರ ಆರೋಪಿಗಳಿಗೆ ಮರಣದಂಡನೆ ವಿಧಿಸಲು ಭಾರತೀಯ ದಂಡ ಸಂಹಿತೆ ತಿದ್ದುಪಡಿ ತರಲು ಕರ್ನಾಟಕ ಹೈಕೋರ್ಟ್ ಕೋರಿದೆ.
ಕಾನೂನು ವಿದ್ಯಾರ್ಥಿನಿಯೊಬ್ಬಳ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಏಳು ಆರೋಪಿಗಳಿಗೆ ವಿಚಾರಣಾ ನ್ಯಾಯಾಲಯವು ನೀಡಿದ ಜೀವಾವಧಿ ಶಿಕ್ಷೆಯನ್ನು ನ್ಯಾಯಾಲಯವು ಎತ್ತಿಹಿಡಿದಿದೆ. ನ್ಯಾಯಮೂರ್ತಿ ಬಿ.ವೀರಪ್ಪ ಮತ್ತು ನ್ಯಾಯಮೂರ್ತಿ ಕೆ.ನಟರಾಜನ್ ಅವರನ್ನೊಳಗೊಂಡ ಹೈಕೋರ್ಟಿನ ವಿಬಾಗೀಯ ಪೀಠವು ವಿಚಾರಣಾ ನ್ಯಾಯಾಲಯವು 2013 ಮತ್ತು 2017 ರಲ್ಲಿ ನೀಡಿದ ತೀರ್ಪನ್ನು ಎತ್ತಿಹಿಡಿದಿದೆ.
ಸಾಮೂಹಿಕ ಅತ್ಯಾಚಾರ ಮತ್ತು ಕೊಲೆಗೆ ಪ್ರಸ್ತುತ ಮರಣದಂಡನೆ ಶಿಕ್ಷೆ ಇದೆ. ಐಪಿಸಿ ಸೆಕ್ಷನ್ 376 ಡಿ ಪ್ರಕಾರ ಸಾಮೂಹಿಕ ಅತ್ಯಾಚಾರದಲ್ಲಿ ಸಾವು ಸಂಭವಿಸದಿದ್ದರೆ ಮರಣದಂಡನೆ ಶಿಕ್ಷೆಯಿಲ್ಲ. ಒಬ್ಬ ಅಥವಾ ಅದಕ್ಕಿಂತ ಹೆಚ್ಚಿನ ಪುರುಷರಿಂದ ಮಹಿಳೆ ಅತ್ಯಾಚಾರಕ್ಕೊಳಗಾದರೆ 20 ವರ್ಷಗಳ ಜೈಲು ಶಿಕ್ಷೆ ಅಥವಾ ಕಠಿಣ ಜೀವಾವಧಿ ಶಿಕ್ಷೆ ಇದೆ.
ಆದರೆ ಎಲ್ಲಾ ರೀತಿಯ ಅತ್ಯಾಚಾರಗಳಿಗೆ ಮರಣದಂಡನೆಯನ್ನು ಸೇರಿಸಬೇಕೆಂದು ರಾಷ್ಟ್ರಮಟ್ಟದಲ್ಲಿರುವ ಕಾನೂನನ್ನು ತಿದ್ದುಪಡಿ ಮಾಡಬೇಕೆಂದು ನ್ಯಾಯಾಲಯ ನಿರ್ದೇಶಿಸಿದೆ. ಅಕ್ಟೋಬರ್ 13, 2012ರಂದು ನಗರದ ಜ್ಞಾನ ಭಾರತಿ ಕ್ಯಾಂಪಸ್ ಬಳಿ 21 ವರ್ಷದ ಕಾನೂನು ವಿಧ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆಯನ್ನು ಎತ್ತಿಹಿಡಿಯುವಾಗ ನ್ಯಾಯಾಲಯವು ಅಭಿಪ್ರಾಯಪಟ್ಟಿದೆ.

Join Whatsapp