ರಾಮನ ಬಳಿಕ ಕೃಷ್ಣ: ಮಸ್ಜಿದ್ ಒಡೆದು ಮಂದಿರ ಕೇಳುವ ಹಿಂದುತ್ವ ರಾಜಕೀಯ

Prasthutha|

ಮುನ್ನೂರೈವತ್ತು ಸಾಕ್ಷಿಗಳು, 600 ದಾಖಲೆಗಳು, ಹಲವು ವೀಡಿಯೊ ಕ್ಯಾಸೆಟ್ ಗಳು ಮತ್ತು ದಿನಪತ್ರಿಕೆ ವರದಿಗಳು ಬಾಬ್ರಿ ಧ್ವಂಸ ಆರೋಪಿಗಳಾದ ಲಾಲ್ ಕೃಷ್ಣ ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಕಲ್ಯಾಣ್ ಸಿಂಗ್, ಉಮಾಭಾರತಿ, ರಾಮಜನ್ಮಭೂಮಿ ತೀರ್ಥ ಕ್ಷೇತ್ರದ ಅಧ್ಯಕ್ಷ ನೃತ್ಯ ಗೋಪಾಲ್ ದಾಸ್ ಮತ್ತು ಶಿವಸೇನಾ ನಾಯಕ ಸತೀಶ್ ಪ್ರಧಾನ್  ಹಾಗೂ ಇತರರನ್ನು ಶಿಕ್ಷಿಸಲು ಸಾಕ್ಷಿಯಾಗಲೇ ಇಲ್ಲ.

- Advertisement -

ರಾಜಕೀಯದಲ್ಲಿ ವಿಶೇಷವಾಗಿ ಭಾರತದಲ್ಲಿ ಸಾಂಕೇತಿಕತೆಯು ಪ್ರಮುಖ ಸ್ಥಾನವನ್ನು ಪಡೆಯುತ್ತದೆ. 28 ವರ್ಷಗಳ ಮುಂಚೆ ಏನು ನಡೇದಿದೆಯೋ ಅದು ಮುಂದಿನ ಭವಿಷ್ಯದ ಕ್ರಿಯಾಸಾಧ್ಯತೆಗಳನ್ನು ತಿಳಿಸುತ್ತದೆ. ವ್ಯಾಪಾರದಲ್ಲಿ ಹೇಳುವಂತೆ, ಮೊದಲ ಮಿಲಿಯನ್ ಗಳಿಕೆಯು ಅತ್ಯಂತ ಕಷ್ಟದ ಹಾದಿಯದ್ದಾಗಿರುತ್ತದೆ. ಒಮ್ಮೆ ನೀವು ಅಲ್ಲಿಗೆ ತಲುಪಿದಾಗ ಎಲ್ಲವೂ ಸುಲಭವಾಗುತ್ತದೆ ಮತ್ತು ಗುಣಕ ಪರಿಣಾಮಗಳು ಆರಂಭಗೊಳ್ಳುತ್ತದೆ. ಅಯೋಧ್ಯೆ ಮತ್ತು ಬಾಬ್ರಿ ಮೂರು ದಶಕಗಳ ಮುಂಚೆ ಹಾಕಲಾದ ರಾಜಕೀಯ ಹೂಡಿಕೆಯಾಗಿದೆ. ತಮ್ಮ ಬಡ್ಡಿಗಳಿಕೆಯಲ್ಲಿ ಮುಳುಗಿಹೋಗುವ ಮತ್ತು ಹೊಸ ಹೂಡಿಕೆಗಳನ್ನು ಹಾಕುವ ಸಮಯ ರಾಜಕೀಯ ಹೂಡಿಕೆದಾರರಿಗೆ ಬಂದಿದೆ. ಪ್ರಾಥಮಿಕವಾಗಿ ಹೇಳುವುದಾದರೆ ಅವರಿಗೆ ವಿಸ್ತಾರ ಅಭಿಯಾನವನ್ನು ಮುಂದುವರಿಸುವ ಮತ್ತು ಮುಂದೆ ಚಲಿಸಲು ಹೊಸ ಇಂಧನವನ್ನು ಹಾಕಿಕೊಳ್ಳುವ ಸಮಯ ಇದಾಗಿದೆ. ಬಾಬ್ರಿಯನ್ನು ಯಾರೂ ಧ್ವಂಸಗೊಳಿಸದಿರುವುದರಿಂದ, ಕಾಶಿ ಮತ್ತು ಮಥುರಾಗಳಿಗೆ ಹೊಸ ಹೂಡಿಕೆಯ ಮಾರ್ಗಗಳು ಮುಕ್ತವಾಗಿರುವುದು ಸ್ಪಷ್ಟವಾಗುತ್ತದೆ.

ಹೊಸ ದುಷ್ಟ ಯೋಜನೆ

- Advertisement -

ಬಾಬ್ರಿ ಮಸ್ಜಿದ್ ಧ್ವಂಸ ಪ್ರಕರಣದ ಅಂತ್ಯವು ಹಿಂದುತ್ವ ಪ್ರಚಾರಕರ ಹೊಸ ದುಷ್ಟ ಯೋಜನೆಯ ಆರಂಭವಾಗಿದೆ.

ಬಾಬ್ರಿ ಧ್ವಂಸದ ಆರೋಪಿಗಳಲ್ಲೋರ್ವ ಭಾರತೀಯ ಜನತಾ ಪಕ್ಷದ ವಿನಯ ಕಟಿಯಾರ್, ಕಾಶಿಯ ಜ್ನಾನವಾಪಿ ಮಸೀದಿ ಮತ್ತು ಮಥುರಾದ ಷಾಹಿ ಈದ್ಗಾ ಮಸೀದಿ ಮುಂದಿನ ಅಜೆಂಡಾ ಎಂದು ಉಲ್ಲೇಖಿಸಿದ್ದರು. ಮಸೀದಿಯನ್ನು ಒಡೆದು ಮಂದಿರ ಕೇಳುವುದು, ಬಿಜೆಪಿಗೆ ಚಿನ್ನದ ಮೊಟ್ಟೆಯಿಡುವ ಬಾತುಕೋಳಿಯಾಗಿದೆ.  ಮುಸ್ಲಿಮ್ ಆಕ್ರಮಣಕೋರರ ನಂಬಿಕೆ ಮತ್ತು ಸೇಡಿನ ಬುನಾದಿಯಲ್ಲಿ ಭಾವನಾತ್ಮಕ ವಿಷಯಗಳ ಮೇಲೆ ರಾಷ್ಟ್ರದ ಬಹುಸಂಖ್ಯಾತರಿಂದ ಆಡಳಿತಕ್ಕೆ ಆಯ್ಕೆಯಾಗುವುದು ಅವರ ಯೋಜನೆಯಾಗಿದೆ.

ಕತೆಯನ್ನು ಬಹಳ ಎಚ್ಚರಿಕೆಯಿಂದ ಪೋಣಿಸಲಾಗುತ್ತದೆ. ಬಿಜೆಪಿಯ ಚುನಾವಣಗೆ ಫಲವತ್ತಾದ ಭೂಮಿಯಾಗಿರುವ ಉತ್ತರ ಇಂಡಿಯಾದ ದೇವರುಗಳ ಶ್ರೇಣಿಯನ್ನು ತನ್ನ ಉದ್ದೇಶಕ್ಕಾಗಿ ಬಹಳ ಸೂಕ್ಷ್ಮವಾಗಿ ಆಯ್ಕೆಮಾಡಲಾಗುತ್ತದೆ. ರಾಮ, ಕೃಷ್ಣ, ಶಿವ ಹೀಗೆ ಶ್ರೇಣಿಯು ಜನಪ್ರಿಯತೆಯನ್ನು ಆಧಾರಿಸಿರುತ್ತದೆ.

ಮಸ್ಜಿದ್ ನ ಧ್ವಂಸವು ಕಾನೂನಿನ “ಆಘಾತಕಾರಿ ಉಲ್ಲಂಘನೆ’ಯೆಂಬ ಸುಪ್ರೀಂ ಕೋರ್ಟ್ ಗುರುತಿಸಿರುವ ಸನ್ನಿವೇಶದಲ್ಲಿ ವೀಕ್ಷಿಸುವಾಗ 32 ಮಂದಿ ಆರೋಪಿಗಳ ಬಿಡುಗಡೆಯು ಧ್ವಂಸವನ್ನು ‘ನ್ಯಾಯಸಮ್ಮತ’ಗೊಳಿಸಿರುವುದಲ್ಲದೆ ಅಪರಿಚಿತ ಗುಂಪೊಂದು ಏನನ್ನೂ ಮಾಡಿ ತಪ್ಪಿಸಿಕೊಳಬಹುದು ಎಂಬುದನ್ನು ಸೂಚಿಸುತ್ತದೆ.

1992- ಒಂದು ಫಲಕ

ಸ್ವಾತಂತ್ರ್ಯಾ ನಂತರ ಭಾರತ ಕಂಡ ರಕ್ತಪಾತದ ಗಲಭೆ (2000 ಹತ್ಯೆ)ಯಾಗಿ ಮಾತ್ರ 1992ನೆ ವರ್ಷವನ್ನು ಕಾಣಲು ಸಾಧ್ಯವಿಲ್ಲ. ಅದು ಹಿಂದೂಗಳೊಳಗೆ ಸಂತ್ರಸ್ತ ಭಾವವನ್ನು ತುಂಬುವುದಕ್ಕೆ ಒಂದು ಆರಂಭವೂ ಆಗಿತ್ತು. ಮೊದಲು ಮೊಘಲರಿಂದ, ನಂತರ ಮುಸ್ಲಿಮರನ್ನು ತುಷ್ಟೀಕರಿಸುವುದಕ್ಕಾಗಿ ಏನನ್ನೂ ಮಾಡಬಲ್ಲ ಕಾಂಗ್ರೆಸ್ ನಿಂದ ಹಿಂದೂ ಸಮುದಾಯವು ಅನ್ಯಾಯಕ್ಕೊಳಗಾಗಿದೆ ಎಂಬ ಸಂತ್ರಸ್ತ ಭಾವವನ್ನು ತುಂಬುವುದನ್ನು ಆರಂಭಿಸಲಾಯಿತು.

ದಶಕಗಳ ಹಿಂದೆ ತುಂಬಲಾದ ಈ ಸಂಕೀರ್ಣ ಸಂತ್ರಸ್ತ ಭಾವವು ಬಹುಸಂಖ್ಯಾತ ಸಮುದಾಯದ ಒಂದು ವರ್ಗಕ್ಕೆ ಪ್ರಾಬಲ್ಯತೆಯ ಭಾವವಾಗಿ ಇಂದು ಬದಲಾಗಿದೆ. ಈ ವರ್ಗವು ತನ್ನ ಅನನ್ಯತೆಯನ್ನು ಒತ್ತಿಹೇಳಲು ಬಯಸುತ್ತದೆ. 2019ರ ಅಯೋಧ್ಯ ತೀರ್ಪು ಮತ್ತು ಬಾಬ್ರಿ ಧ್ವಂಸ ಪ್ರಕರಣದಲ್ಲಿ ಆಗಿರುವ ಖುಲಾಸೆಯು ಹಿಂದುತ್ವದ ಈ ಯೋಜನೆಗೆ ಇಂಧನವಾಗಲಿದೆ. ಹಿಂದುತ್ವಕ್ಕೆ ಮಸ್ಜಿದ್ ಗಳ ಧ್ವಂಸ ಮತ್ತು ಮಂದಿರಗಳ ಒಡೆತನವನ್ನು ‘ಮರಳಿ ಕೇಳು’ವುದು ಒಂದು ಗುರುತಾಗಿದೆ. ಆದರೆ ಅದು ಕೇವಲ ಒಂದು ನಂಬಿಕೆಯನ್ನು ಮಾತ್ರವೇ ಹೊಂದಿದೆ- ಅಧಿಕಾರ.

ರಾಮನ ಬಳಿಕ ಕೃಷ್ಣ

ಮಥುರಾದಲ್ಲಿ ಶ್ರೀ ಕೃಷ್ಣ ಜನ್ಮಸ್ಥಾನದಲ್ಲಿ ಶಾಹಿ ಈದ್ಗಾ ಮಸೀದಿ ಕಟ್ಟಲಾಗಿರುವುದರಿಂದ ಅದನ್ನು ತೆರವುಗೊಳಿಸಬೇಕೆಂದು ಕೋರಿ ಬಾಲ ದೇವತೆ ಭಗವಾನ್ ಶ್ರೀಕೃಷ್ಣ ವಿರಾಜಮಾನ್ ಪರವಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಗಿತ್ತು. 1989ರಲ್ಲಿ ಅಯೋಧ್ಯೆಯಲ್ಲಿ ರಾಮಲಲ್ಲಾನ ಪರವಾಗಿ ನಾಗರಿಕ ಅರ್ಜಿಯೊಂದನ್ನು ಸಲ್ಲಿಸಲಾಗಿತ್ತು. ಆ ನಂತರ ಏನಾಯಿತು ಎಂಬುದನ್ನು ನಾವೆಲ್ಲಾ ತಿಳಿದಿದ್ದೇವೆ.

ಬಾಬ್ರಿ ಧ್ವಂಸ ಆರೋಪದಲ್ಲಿ ಎಲ್ಲಾ ಆರೋಪಿಗಳನ್ನು ದೋಷಮುಕ್ತಗೊಳಿಸಿರುವುದು ಇನ್ನೊಂದು ಅಯೋಧ್ಯೆಯನ್ನು ಪುನರಾವರ್ತಿಸಲು ಒಂದು ಉಚಿತ ಪಾಸ್ ಆಗಲಿದೆ. ಇತ್ತೀಚೆಗೆ ರಚಿಸಲಾಗಿರುವ ಶ್ರೀಕೃಷ್ಣ ಜನ್ಮಭೂಮಿ ನ್ಯಾಸ್ ಸಂಘಟನೆಯ ರಾಷ್ಟ್ರೀಯ ಚೆಯರ್ ಮ್ಯಾನ್ ವಿರುದ್ಧ ಕೋಮು ಉದ್ರೇಕಕಾರಿ ಭಾಷಣಕ್ಕಾಗಿ ಎಫ್.ಐ.ಆರ್ ದಾಖಲಿಸಲಾಗಿತ್ತು. ಹಿರಿಯ ಪೊಲೀಸ್ ಅಧಿಕಾರಿಯ ಪ್ರಕಾರ “ಕೃಷ್ಣ ಜನ್ಮಸ್ಥಾನದಲ್ಲಿರುವ ಮಸೀದಿಯನ್ನು ಧ್ವಂಸಗೊಳಿಸಲಾಗುತ್ತದೆ ಮತ್ತು ಆ ಪ್ರದೇಶಕ್ಕೆ ಜನ್ಮಭೂಮಿ ಸ್ಥಳವನ್ನು ವಿಸ್ತರಿಸಲಾಗುತ್ತದೆ” ಎಂದು ಆತ ಭಾಷಣ ಮಾಡಿದ್ದರು.

ಅಯೋಧ್ಯ ತೊ ಬಸ್ ಝಾನ್ಕಿ ಹೆ, ಕಾಶಿ, ಮಥುರಾ ಬಾಕಿ ಹೈ (ಅಯೋಧ್ಯೆ ಕೇವಲ ಒಂದು ಮುನ್ನೋಟ, ಕಾಶಿ ಮತ್ತು ಮಥುರಾ ಮುಂದಿನದ್ದು) ಎಂಬ ಬಿಜೆಪಿಯ ಕುಖ್ಯಾತ ಘೋಷಣೆ ಈಗಲೂ ಪ್ರತಿಧ್ವನಿಸುತ್ತಿದೆ.

Join Whatsapp