ರಾಜಭವನದ ಘನತೆಯನ್ನು ಕಾಪಾಡಬೇಕಾದರೆ ರಾಜ್ಯಪಾಲರನ್ನು ವಾಪಸ್ ಕರೆಸಿಕೊಳ್ಳಬೇಕು : ಶಿವಸೇನೆ

Prasthutha|


ಮುಂಬೈ : ಮಹಾರಾಷ್ಟ್ರದಲ್ಲಿ ದೇವಾಲಯಗಳನ್ನು ತೆರೆಯದಿರುವ ಬಗ್ಗೆ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಮತ್ತು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮಧ್ಯೆ ವಾಕ್ಸಮರ ತೀವ್ರಗೊಂಡಿದೆ. ರಾಜಭವನದ ಘನತೆಯನ್ನು ಕಾಪಾಡಬೇಕೆಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಬಯಸುವುದಾದರೆ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿಯವರನ್ನು ಅಧಿಕಾರದಿಂದ ತೆಗೆದುಹಾಕುವಂತೆ ಆಡಳಿತಾರೂಢ ಶಿವಸೇನೆ ಒತ್ತಾಯಿಸಿದೆ.

- Advertisement -


ಪಕ್ಷದ ಮುಖವಾಣಿ ಸಾಮ್ನಾದಲ್ಲಿನ ಲೇಖನದಲ್ಲಿ ಶಿವಸೇನೆ ರಾಜ್ಯಪಾಲರನ್ನು ಅಧಿಕಾರದಿಂದ ತೆಗೆದುಹಾಕುವಂತೆ ಒತ್ತಾಯಿಸಿದೆ. ರಾಜ್ಯ ಸರಕಾರದ ವಿರುದ್ಧ ರಾಜ್ಯಪಾಲರ ಕಛೇರಿಯನ್ನು ಬಳಸುವ ಬಿಜೆಪಿಯ ಅಜೆಂಡಾ ಇದರಿಂದ ಸಾಬೀತಾಗುತ್ತದೆ ಎಂದು ಶಿವಸೇನೆ ಲೇಖನದಲ್ಲಿ ಆರೋಪಿಸಿದೆ. ದೇವಾಲಯಗಳನ್ನು ತೆರೆಯಬೇಕಾದರೆ ಬಿಜೆಪಿ ಸಾಮಾನ್ಯ ರಾಷ್ಟ್ರೀಯ ನೀತಿಯನ್ನು ತರಬೇಕು. ಯಾಕೆಂದರೆ ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲಿಯೂ ಸಹ ಅನೇಕ ಪ್ರಮುಖ ದೇವಾಲಯಗಳು ಇನ್ನೂ ಮುಚ್ಚಲ್ಪಟ್ಟಿವೆ.


“ರಾಜ್ಯಪಾಲರಿಗೆ ಉದ್ಧವ್ ನೀಡಿದ ಉತ್ತರದಿಂದ ದೇವತೆಗಳು ಕೂಡ ದೇವಾಲಯದ ಘಂಟೆಯನ್ನು ಸಂತೋಷದಿಂದ ಮೊಳಗಿಸುತ್ತಿರಬಹುದು. ಆ ಧ್ವನಿ ಮೋದಿ ಮತ್ತು ಅಮಿತ್ ಶಾ ಅವರಿಗೆ ತಲುಪಿದರೆ ಅವರು ರಾಜಭವನದ ಘನತೆಯನ್ನು ಕಾಪಾಡಲು ರಾಜ್ಯಪಾಲರನ್ನು ಅಧಿಕಾರದಿಂದ ವಜಾಗೊಳಿಸಬಹುದು” ಎಂದು ಲೇಖನದಲ್ಲಿ ಉಲ್ಲೇಖಿಸಲಾಗಿದೆ.

Join Whatsapp