ಯುನೈಟೆಡ್ ಚೊಕ್ಕಬೆಟ್ಟು ಗ್ಲೋಬಲ್ ಫೋರಂ ಲೋಕಾರ್ಪಣೆ | ಸಾಧಕರಿಗೆ ಸನ್ಮಾನ

Prasthutha|

ಮಂಗಳೂರು : ಯುನೈಟೆಡ್ ಚೊಕ್ಕಬೆಟ್ಟು ಗ್ಲೋಬಲ್ ಫೋರಂ ಲೋಕಾರ್ಪಣೆ ಕಾರ್ಯಕ್ರಮ ಚೊಕ್ಕಬೆಟ್ಟು ಜೆಎಂಎಂ ಹಾಲ್ ನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಸಾಧಕರಿಗೆ ಸನ್ಮಾನ ಮತ್ತು ಪ್ರತಿಭಾ ಪುರಸ್ಕಾರವನ್ನೂ ಆಯೋಜಿಸಲಾಗಿತ್ತು.

- Advertisement -

ನಮ್ಮ ಬಹಳ ದಿನಗಳ ಕನಸು ನನಸಾಗಿದೆ. ವಿದೇಶದಲ್ಲಿರುವ ಚೊಕ್ಕಬೆಟ್ಟಿನ ಯುವಕರು ಸಂಘಟಿತರಾಗಿ ಸಂಸ್ಥೆಯೊಂದನ್ನು ಕಟ್ಟಿಕೊಂಡು ಊರಿನ ಅಭಿವೃದ್ಧಿಗೆ ಯೋಜನೆ ಹಾಕಿರುವುದು ನಿಜಕ್ಕೂ ಶ್ಲಾಘನೀಯ” ಎಂದು ಕಾರ್ಯಕ್ರಮ ಉದ್ಘಾಟಿಸಿದ ಚೊಕ್ಕಬೆಟ್ಟು ಖತೀಬ್ ಮೌಲಾನಾ ಅಬ್ದುಲ್ ಅಜೀಜ್ ದಾರಿಮಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಮಾರಂಭದ ಅಧ್ಯಕ್ಷತೆಯನ್ನು ಯುನೈಟೆಡ್ ಚೊಕ್ಕಬೆಟ್ಟು ಗ್ಲೋಬಲ್ ಫಾರಂನ ಅಧ್ಯಕ್ಷರಾದ ಸಾದಿಕ್ ಚೊಕ್ಕಬೆಟ್ಟು ವಹಿಸಿದ್ದರು.

- Advertisement -

ಚೊಕ್ಕಬೆಟ್ಟು ಮಸೀದಿ ಅಧ್ಯಕ್ಷರಾದ ಅಮೀರ್ ಹುಸೇನ್, ಮಾಜಿ ಶಾಸಕ ಮೊಯ್ದಿನ್ ಬಾವ, ಕೃಷ್ಣಾಪುರ ಸಂಯುಕ್ತ ಜಮಾತಿನ ಅಧ್ಯಕ್ಷರಾದ ಬಿ ಎಂ ಮುಮ್ತಾಝ್ ಅಲಿ, ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್&ಇಂಡಸ್ಟ್ರೀಸ್ ಅಧ್ಯಕ್ಷರಾದ ಅಲ್ ಹಾಜ್ ಎಸ್ ಎಂ ರಶೀದ್, ಹಿದಾಯ ಫೌಂಡೇಶನ್ ನ ಸ್ಥಾಪಕಾಧ್ಯಕ್ಷರಾದ ಖಾಸಿಂ ಅಹ್ಮದ್, ಕೆ ಕೆ ಎಂ ಎ ಕರ್ನಾಟಕ ರಾಜ್ಯಾಧ್ಯಕ್ಷರಾದ ಎಸ್ ಎಂ ಫಾರೂಕ್, ಕೆಎಂಟಿ ಜುಬೈಲ್ ಇದರ ಸಿಇಒ ಅಬ್ದುಲ್ ರಜಾಕ್, ಚೊಕ್ಕಬೆಟ್ಟು ಜಾಮಿಯಾ ಆಂಗ್ಲ ಮಾಧ್ಯಮ ಶಾಲೆಗಳ ಅಧ್ಯಕ್ಷರಾದ ಜೆ ಮೊಹಮ್ಮದ್, ಸಾಮಾಜಿಕ ಕಾರ್ಯಕರ್ತ ಅಬೂಬಕರ್ ಕುಳಾಯಿ, ಎನರ್ಜಿಯ ಜುಬೈಲ್ ಇದರ ಚೇರ್ಮನ್ ಟಿ ಎಚ್ ಮೆಹಬೂಬ್, ಸ್ಥಳೀಯ ಕಾರ್ಪೊರೇಟರ್ ಸಂಶಾದ್ ಬೇಗಂ ಮೊದಲಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಚೊಕ್ಕಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕರಾದ ವಾಸುದೇವ ರಾವ್, ಚೊಕ್ಕಬೆಟ್ಟು ಖತೀಬ್ ಮೌಲಾನಾ ಅಬ್ದುಲ್ ಅಜೀಜ್ ದಾರಿಮಿ, ಕರ್ನಾಟಕ ಸ್ಟೇಟ್ ರಿಸರ್ವ್ ಪೊಲೀಸ್ ನ ಬಶೀರ್ ಚೊಕ್ಕಬೆಟ್ಟು ಮತ್ತು ಸಾಮಾಜಿಕ ಕಾರ್ಯಕರ್ತ ಮುಹಮ್ಮದ್ ಕಮಾಲ್ ರವರನ್ನು ಸನ್ಮಾನಿಸಲಾಯಿತು.

ಪಿಯುಸಿ, ಎಸ್ಸೆಸ್ಸೆಲ್ಸಿ ಮತ್ತು ಮದ್ರಸ ವಿದ್ಯಾಭ್ಯಾಸದಲ್ಲಿ ವಿಶೇಷ ಸಾಧನೆ ಮಾಡಿದ ಹತ್ತು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಿ, ಅಭಿನಂದಿಸಲಾಯಿತು. ಶಾಝ್ ರಶೀದ್ ಹುಸೈನ್ ಕಿರಾತ್ ಪಠಿಸಿದರು. ಇಬ್ರಾಹಿಂ ಗುಲಾಂ ಧನ್ಯವಾದಗೈದರು. ಸಮಾಜ ಸೇವಕ ರಫೀಕ್ ಮಾಸ್ಟರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Join Whatsapp