ಮಾಸ್ಕ್ ಧರಿಸುವವರನ್ನು ಕಪಿಗಳಿಗೆ ಹೋಲಿಸಿದ ಅನಂತ ಕುಮಾರ್ ಹೆಗಡೆ | ಸುರಕ್ಷತೆ ಬಗ್ಗೆ ಲೇವಡಿ ಮಾಡಿದ ಸಂಸದನ ವಿರುದ್ಧ ಜನಾಕ್ರೋಶ

Prasthutha|

ಮಾಸ್ಕ್ ಹಾಕಿದವರನ್ನು ನೋಡುವಾಗ ರಾಮಾಯಣ ನೆನಪಾಗುತ್ತದೆ ಎಂದ ಸಂಸದ!!

- Advertisement -

ಬೆಂಗಳೂರು : ಕೊರೋನ ಸಂಕಷ್ಟದ ಸಂದರ್ಭ ಸೋಂಕು ತಡೆಗೆ ಮಾಸ್ಕ್ ಹಾಕುವುದು ಕಡ್ಡಾಯ ಎಂದು ಸರ್ಕಾರ ಹೇಳುತ್ತಿದೆ. ಮಾಸ್ಕ್ ಹಾಕದ ಜನ ಸಾಮಾನ್ಯರಿಗೆ ಅಧಿಕಾರಿಗಳು ದಂಡವನ್ನೂ ಹಾಕುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ಕಾರವಾರ ಬಿಜೆಪಿ ಸಂಸದ ಅನಂತ ಕುಮಾರ್ ಹೆಗಡೆ ಮಾಸ್ಕ್ ಹಾಕುವವರನ್ನು ಕಪಿಗಳಿಗೆ ಹೋಲಿಸಿ ವ್ಯಂಗ್ಯವಾಡಿದ ಘಟನೆ ನಡೆದಿದೆ. ಆ ಮೂಲಕ ವಿವಾದಾತ್ಮಕ ಹೇಳಿಕೆಗಳಿಗೇ ಕುಖ್ಯಾತಿ ಪಡೆದಿರುವ ಅನಂತ ಹೆಗಡೆ ಅವರು ಮತ್ತೊಮ್ಮೆ ತಮ್ಮ ಉದ್ದಟತನ ಪ್ರದರ್ಶಿಸಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಹೆಗಡೆ, “ಎಲ್ಲರನ್ನೂ ನೋಡಿದಾಗ ನನಗೆ ರಾಮಾಯಣ ನೆನಪಾಗುತ್ತಿದೆ’’ ಎಂದು ಹೇಳಿದ್ದಾರೆ. ತಪ್ಪು ತಿಳ್ಕೋಬೇಡಿ, ತಮಾಶೆಗೆ ಹೇಳುತ್ತಿದ್ದೇನೆ ಎಂದು ಹೇಳುತ್ತಾ ಈ ವಿಚಾರ ಹೆಗಡೆ ಪ್ರಸ್ತಾಪಿಸಿದ್ದಾರೆ. ನಮಗೆ ಹೆದರಿಸಿದ್ದಾರೆ ಅಷ್ಟೇ, ಕೊರೋನಾ, ಗಿರೋನ ಏನಿಲ್ಲ ಎಂದು ಅವರು ತಿಳಿಸಿದ್ದಾರೆ. ಇರಲಿ, ಈ ಭ್ರಮೆಯಿಂದ ಬೇಗ ನಾವು ಹೊರಬರಬೇಕಿದೆ ಎಂದೂ ಅವರು ಹೇಳಿದ್ದಾರೆ.

- Advertisement -

ಸಂಸದರೇ ಈ ರೀತಿ ಹೇಳುತ್ತಿರುವುದಾದರೆ, ಸರಕಾರಗಳು ಕೊರೋನ ನಿವಾರಣೆಗೆ ಇಷ್ಟೊಂದು ಖರ್ಚು ಮಾಡುತ್ತಿರುವುದು ಸುಳ್ಳೇ ಎಂಬ ಪ್ರಶ್ನೆಗಳು ಹುಟ್ಟುತ್ತವೆ. ಜನಸಾಮಾನ್ಯರ ಮೇಲೆ ಒತ್ತಡ ಹೇರಿ ಸಂಸದರೊಬ್ಬರು ಸರಕಾರದ ನಿಯಮಗಳನ್ನು ಈ ರೀತಿ ಲೇವಡಿ ಮಾಡುವುದರಿಂದ ಸಾರ್ವಜನಿಕ ವಲಯದಲ್ಲಿ ಯಾವ ರೀತಿಯ ಸಂದೇಶ ರವಾನೆಯಾಗುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಈಗಾಗಲೇ ಹಲವಾರು ಬಾರಿ ವಿವಾದಗಳನ್ನು ಮೈಗೆಳೆದುಕೊಂಡಿರುವ ಅನಂತ ಕುಮಾರ್ ಹೆಗಡೆ, ಎಂದಿನಂತೆ ಉದ್ದಟತನದ ಮಾತುಗಳನ್ನಾಡುತ್ತಿರುವುದು ಅವರ ಪಕ್ಷದ ಗಮನಕ್ಕೆ ಬರುತ್ತಿಲ್ಲವೇ? ಅವರನ್ನು ನಿಯಂತ್ರಿಸಲು ಅವರ ಪಕ್ಷದ ನಾಯಕತ್ವದಿಂದ ಸಾಧ್ಯವಿಲ್ಲವೇ? ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿವೆ.

Join Whatsapp