ಭಾರತದ ಪ್ರಜಾಪ್ರಭುತ್ವವನ್ನೇ ಘಾಸಿಗೊಳಿಸುವ ಫೇಸ್ಬುಕ್ ನ ಪ್ರಯತ್ನ ಒಂದು ಕ್ರಿಮಿನಲ್ ಅಪರಾಧ | ಜಂಟಿ ಸಂಸದೀಯ ಸಮಿತಿ ತನಿಖೆಗೆ ಕಾಂಗ್ರೆಸ್ ಒತ್ತಾಯ

Prasthutha|

ನವದೆಹಲಿ : ಬಿಜೆಪಿ ಮತ್ತು ಫೇಸ್ ಬುಕ್ ನಡುವಿನ ಅನೈತಿಕ ನಂಟಿನ ಕುರಿತಂತೆ ಇತ್ತೀಚೆಗೆ ‘ವಾಲ್ ಸ್ಟ್ರೀಟ್ ಜರ್ನಲ್’ ಮತ್ತು “ಟೈಮ್’ ಮ್ಯಾಗಜಿನ್ ನಲ್ಲಿ ಪ್ರಕಟವಾಗಿರುವ ವರದಿಗಳ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳು ಈಗ ಆಡಳಿತ ಪಕ್ಷದ ವಿರುದ್ಧ ಗರಂ ಆಗಿವೆ. ಅಮೆರಿಕದ ಮ್ಯಾಗಜಿನ್ ಗಳಲ್ಲಿ ಪ್ರಕಟವಾದ ಅಂಶಗಳ ಕುರಿತು ತನಿಖೆ ನಡೆಸಲು ಸಂಟಿ ಸಂಸದೀಯ ಸಮಿತಿ ಕೂಡಲೇ ರಚಿಸಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ. ಫೇಸ್ ಬುಕ್ ಇಂಡಿಯಾದ ವ್ಯವಹಾರಗಳು ಮತ್ತು ಅದರಲ್ಲಿ ಭಾಗಿಯಾದವರ ವಿರುದ್ಧ ಕ್ರಿಮಿನಲ್ ತನಿಖೆ ನಡೆಸಬೇಕೆಂದು ಅದು ಆಗ್ರಹಿಸಿದೆ.

- Advertisement -

ಇತ್ತಿಚೆಗೆ ಪ್ರಕಟವಾದ ಸುದ್ದಿಗಳ ಪ್ರಕಾರ, ಭಾರತದ ಪ್ರಜಾಪ್ರಭುತ್ವದ ಮೇಲೆ ಘಾಸಿಗೊಳಿಸಿದ ಫೇಸ್ ಬುಕ್ ನ ಮಧ್ಯಪ್ರವೇಶಿಕೆಯು ನಾಚಿಕೆಗೇಡು ಮತ್ತು ಕ್ರಿಮಿನಲ್ ಅಪರಾಧವಾಗಿದೆ ಎಂದು ಕಾಂಗ್ರೆಸ್ ನ ಲೋಕಸಭಾ ಸಂಸದೀಯ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ ಹೇಳಿದ್ದಾರೆ. ವೀಡಿಯೊ ಕಾನ್ಫರೆನ್ಸ್ ಮೂಲಕ ಪತ್ರಿಕಾಗೋಷ್ಠಿ ನಡೆಸಿದ ಅವರು ಈ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ದೇಶದಲ್ಲಿ ಅಧಿಕಾರ ಹಿಡಿಯಲು ಬಿಜೆಪಿಗೆ ಫೇಸ್ ಬುಕ್ ಹೇಗೆಲ್ಲ ನೆರವಾಗಿದೆ ಎಂಬುದರ ಕುರಿತು ಇತ್ತೀಚೆಗೆ ವಿದೇಶಿ ಮಾಧ್ಯಮಗಳು ವರದಿ ಮಾಡಿವೆ. ಯಾವುದೇ ನಾಚಿಕೆ, ಮಾನ ಮರ್ಯಾದೆ ಇಲ್ಲದೆ ಇಡೀ ಭಾರತದ ಬಹುತೇಕ ಮಾಧ್ಯಮ ವರ್ಗ ಬಿಜೆಪಿಯ ಬೆಂಬಲಕ್ಕೆ ಶರಣಾಗಿರುವಾಗ, ವಿದೇಶಿ ಮಾಧ್ಯಮಗಳು ಈ ರೀತಿ ಆಡಳಿತಾರೂಢ ಪಕ್ಷ ಮತ್ತು ಫೇಸ್ ಬುಕ್ ನಡುವಿನ ಅನೈತಿಕ ನಂಟಿನ ಕುರಿತು ಸರಣಿ ಲೇಖನಗಳುನ್ನು ಪ್ರಕಟಿಸುತ್ತಿರುವುದು ನಿಜಕ್ಕೂ ಅಚ್ಚರಿದಾಯಕ ಬೆಳವಣಿಗೆಯಾಗಿದೆ.

Join Whatsapp