ಬಾಬರಿ ಮಸೀದಿ ಧ್ವಂಸ ಪ್ರಕರಣ ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ ಗೆ ಒಯ್ಯಲು ಅನುಮತಿ ಕೋರಿದ ಕುವೈಟ್ ನ ನ್ಯಾಯವಾದಿ

Prasthutha|

ಮುಂಬೈ : ಅಯೋಧ್ಯೆಯ ಬಾಬರಿ ಮಸೀದಿ ವಿವಾದ ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ತೀರ್ಪು ಹೊರಬಿದ್ದು, ಈ ಕುರಿತ ಚರ್ಚೆಗಳು ಈಗಾಗಲೇ ಕೊನೆಗೊಂಡಿವೆ. ಆದರೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಇನ್ನೂ ಈ ಬಗ್ಗೆ ಚರ್ಚೆಗಳು ಮುಂದುವರಿದಿವೆ. ಅಯೋಧ್ಯೆಯಲ್ಲಿದ್ದ ಮಸೀದಿಯ ಧ್ವಂಸದ ಪ್ರಕರಣವನ್ನು ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ ನಲ್ಲಿ ಪ್ರಶ್ನಿಸಲು ಅನುಮತಿ ನೀಡುವಂತೆ ಕುವೈಟ್ ನ ಖ್ಯಾತ ನ್ಯಾಯವಾದಿ, ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ನಿರ್ದೇಶಕ ಮಿಜ್ ಬಿಲ್ ಅಲ್ ಶುರೇಕ ಮನವಿ ಮಾಡಿದ್ದಾರೆ. ಈ ಕುರಿತು ಅವರು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ಅನುಮತಿ ಕೋರಿ ಟ್ವೀಟ್ ಮಾಡಿದ್ದಾರೆ ಎಂದು ವರದಿಯೊಂದು ತಿಳಿಸಿದೆ.

- Advertisement -

“ಭಾರತದ ಮುಸ್ಲಿಮರ ವಿಚಾರದಲ್ಲಿ ಗಮನಿಸುವುದಾದರೆ, ಇದು ಕೂಡ ಜಾಗತಿಕ ಮಟ್ಟದ ಧಾರ್ಮಿಕ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯ ವಿಷಯವಾಗಿದೆ. ಹೀಗಾಗಿ ನೀವು ತುರ್ತಾಗಿ ನಿಮ್ಮ ಮಂಡಳಿಯ ಸದಸ್ಯರು ಸಭೆ ನಡೆಸಿ, ಬಾಬರಿ ಮಸೀದಿ ಪ್ರಕರಣವನ್ನು ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ ನಲ್ಲಿ ಪ್ರಶ್ನಿಸುವ ಹೊಣೆಯನ್ನು ನಮಗೆ ಒದಗಿಸಿಕೊಡಿ’’ ಎಂದು ಶುರೇಕ ಪತ್ರವೊಂದನ್ನು ಬರೆದಿರುವ ಬಗ್ಗೆ ವರದಿಯಲ್ಲಿ ತಿಳಿಸಲಾಗಿದೆ.

ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಹೊರಬಿದ್ದಿದ್ದು, ಆ ಪ್ರಕಾರ ಈಗಾಗಲೇ ರಾಮ ಮಂದಿರ ನಿರ್ಮಾಣಕ್ಕೆ ಭರದ ಸಿದ್ಧತೆ ನಡೆದಿದೆ.  

Join Whatsapp