ಬಹು ನಿರೀಕ್ಷಿತ ಗೂಗಲ್ ಪಿಕ್ಸೆಲ್ 4ಎ ಫೋನ್ ಆ.4ರಂದು ಬಿಡುಗಡೆ | ಬೆಲೆ, ವೈಶಿಷ್ಟ್ಯತೆ ಬಗ್ಗೆ ಇಲ್ಲಿದೆ ಮಾಹಿತಿ

Prasthutha|

ಬಹು ನಿರೀಕ್ಷಿತ ಗೂಗಲ್ ಪಿಕ್ಸೆಲ್ 4ಎ ಫೋನ್ ಬಿಡುಗಡೆಯ ದಿನ ಕೊನೆಗೂ ಬಹಿರಂಗವಾಗಿದೆ. ಗೂಗಲ್ ಹೊಸ ಸ್ಮಾರ್ಟ್ ಫೋನ್ ಬಿಡುಗಡೆ ಮಾಡುವ ಬಗ್ಗೆ ಪ್ರಕಟಿಸಿದ ಬಳಿಕ, ಹಲವಾರು ಮಂದಿ ಈ ಫೋನ್ ಬಿಡುಗಡೆಯ ದಿನಾಂಕಕ್ಕಾಗಿ ಕಾಯುತ್ತಿದ್ದರು. ಜು.13ರಂದು ಈ ಫೋನ್ ಬಿಡುಗಡೆಯಾಗಲಿದೆ ಎಂದು ಈ ಹಿಂದೆ ಹೇಳಲಾಗಿತ್ತು. ಆದರೆ, ಕೊರೊನಾ ಸಂಕಷ್ಟದ ಹಿನ್ನೆಲೆಯಲ್ಲಿ ಫೋನ್ ಬಿಡುಗಡೆ ಮುಂದಕ್ಕೆ ಹಾಕಲಾಗಿತ್ತು. ಈಗ ಸಿಕ್ಕಿರುವ ಮಾಹಿತಿಗಳ ಪ್ರಕಾರ, ಆಗಸ್ಟ್ 3ರಂದು ಗೂಗಲ್ ಪಿಕ್ಸೆಲ್ 4ಎ ಬಿಡುಗಡೆ ಬಹುತೇಕ ಖಚಿತವಾಗಿದೆ.

- Advertisement -

ಗೂಗಲ್ ಪಿಕ್ಸೆಲ್ 4ಎ 5.81 ಇಂಚು ಇರಲಿದ್ದು, 2340×1080 ಡಿಸ್ಪ್ಲೆ ಇರಲಿದೆ. ಬಲಬದಿಯ ಮೇಲಿನ ಭಾಗದಲ್ಲಿ ಪಂಚ್ ಹೋಲ್ ಕೂಡ ಇರಲಿದೆ. 6 ಜಿಬಿ ರಾಮ್, 64 ಜಿಬಿ ಮತ್ತು 128 ಜಿಬಿ ಸ್ಟೋರೇಜ್ ಸಾಮರ್ಥ್ಯವಿರಲಿದೆ. ಈ ಹ್ಯಾಂಡ್ ಸೆಟ್ ಆ್ಯಂಡ್ರಾಯ್ಡ್ 10 ಆಗಿರಲಿದ್ದು, ಆ್ಯಂಡ್ರಾಯ್ಡ್ 11 ಬಿಡುಗಡೆಯಾದ ತಕ್ಷಣ ಅದಕ್ಕೆ ಅಪ್ಡೇಟ್ ಆಗಲಿದೆ ಎನ್ನಲಾಗಿದೆ. 3,018 ಎಂಎಎಚ್ ಬ್ಯಾಟರಿ ಸಾಮರ್ಥ್ಯವಿದ್ದು, 18 ಡಬ್ಲ್ಯೂ ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆ ಹೊಂದಿರಲಿದೆ. ದೈಹಿಕ ಫಿಂಗರ್ ಪ್ರಿಂಟ್ ವ್ಯವಸ್ಥೆ ಹಿಂದಿನಿಂದ ಇರಲಿದೆ. ಕ್ಯಾಮೆರಾ 12 ಮೆಗಾಪಿಕ್ಸೆಲ್ ಇರಲಿದ್ದು, ಗೂಗಲ್ ನ ಕ್ಯಾಮೆರಾ ಸಾಫ್ಟ್ ವೇರ್ ಹೇಗೆ ಹೆಚ್ಚು ಫಲಿತಾಂಶ ನೀಡುತ್ತದೆ ಎಂಬುದನ್ನು ಕಾದು ನೋಡಬೇಕು. ಬೆಲೆಯ ವಿಚಾರದಲ್ಲಿ ಹೇಳುವುದಾದರೆ, 64 ಜಿಬಿ ಸಾಮರ್ಥ್ಯದ ಗೂಗಲ್ ಪಿಕ್ಸೆಲ್ 4ಎ ಬೆಲೆ 22,500 ರು. ಮತ್ತು 128 ಜಿಬಿ ಸಾಮರ್ಥ್ಯದ ಗೂಗಲ್ ಪಿಕ್ಸೆಲ್ 4ಎ ಬೆಲೆ ಸುಮಾರು 27,000 ರು. ಇರಬಹುದು ಎಂದು ಅಂದಾಜಿಸಲಾಗಿದೆ.

Join Whatsapp