ಪ್ರಶಸ್ತಿ ಪುರಸ್ಕೃತ ಮುಖ್ಯ ಶಿಕ್ಷಕ ಎಂ.ಎಚ್.ಮಲಾರ್‌ಗೆ ಫಸ್ಟ್‌ ಬ್ಯಾಚ್ ನಿಂದ ಸನ್ಮಾನ

Prasthutha|

ಮಂಗಳೂರು: ಇಂದು ಟಿಪ್ಪು ಸುಲ್ತಾನ್ ವಿದ್ಯಾಸಂಸ್ಥೆ ಅಭಿವೃದ್ಧಿ ಕಂಡಿದ್ದರೆ ಪ್ರಥಮ ಬ್ಯಾಚ್ ವಿದ್ಯಾರ್ಥಿಗಳ ಕೊಡುಗೆ ಪ್ರಮುಖವಾಗಿದೆ ಎಂದು ಹಳೆಕೋಟೆ ಸಯ್ಯದ್ ಮದನಿ ಶಿಕ್ಷಣ ಸಂಸ್ಥೆಯ ಮುಖ್ಯ ಶಿಕ್ಷಕ ಕೆ.ಎಂ.ಕೆ ಮಂಜನಾಡಿ ಅಭಿಪ್ರಾಯಪಟ್ಟರು. ‌

- Advertisement -

ಟಿಪ್ಪು ಸುಲ್ತಾನ್ ಪ್ರೌಢ ಶಾಲೆಯ ಪ್ರಥಮ ಸಾಲಿನ ವಿದ್ಯಾರ್ಥಿಗಳಿಂದ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ, ಟಿಪ್ಪು ಸುಲ್ತಾನ್ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಎಂ.ಎಚ್.ಮಲಾರ್ ಅವರಿಗೆ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಎಂ.ಎಚ್. ಮಲಾರ್, ಹಿಂದಿನ ವಿದ್ಯಾರ್ಥಿಗಳಿಂದ ಶಿಕ್ಷಣ ಸಂಸ್ಥೆ, ಸಮಾಜಕ್ಕೆ ತೊಂದರೆಯಾಗಿಲ್ಲ. ಆದರೆ ಇಂದು ಹೆಚ್ಚಿನ ಕಡೆ ವಿದ್ಯಾರ್ಥಿಗಳಿಂದಲೇ ಸಮಸ್ಯೆಯಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ಖೇದಕರ ಎಂದು ಹೇಳಿದರು.

- Advertisement -

ಪ್ರಥಮ ಸಾಲಿನ ವಿದ್ಯಾರ್ಥಿ ಯಾಸಿರ್ ಅರಾಫತ್ ಹಸನ್ ಅಭಿನಂದನಾ ಭಾಷಣ  ಮಾಡಿದರು. ಅಕ್ರಂ ಇನೋಳಿ, ಶಾಲಾ ದಿನಗಳ ಬಗ್ಗೆ ಮೆಲುಕು ಹಾಕಿದರು.

ಟಿಪ್ಪು ಸುಲ್ತಾನ್ ಶಿಕ್ಷಣ ಸಂಸ್ಥೆಯ ಮಾಜಿ ಸಂಚಾಲಕ ಯು.ಕೆ.ಅಬ್ಬಾಸ್ ಅಧ್ಯಕ್ಷತೆ ವಹಿಸಿದ್ದರು. ಉಳ್ಳಾಲ ಕೇಂದ್ರ ಜುಮಾ ಮಸೀದಿಯ ಉಪಾಧ್ಯಕ್ಷ ಯು.ಕೆ.ಮೋನು ಇಸ್ಮಾಯಿಲ್, ಕೋಟೆಪುರ ಜುಮಾ ಮಸೀದಿಯ ಅಧ್ಯಕ್ಷ ಯು.ಕೆ.ಅಬ್ಬಾಸ್ ಮುಖ್ಯ ಅತಿಥಿಗಳಾಗಿದ್ದರು.

ಹಳೆ ವಿದ್ಯಾರ್ಥಿ ಅಬ್ದುಲ್ ಸಲಾಂ ಯು.ಕೆ. ಸ್ವಾಗತಿಸಿದರು. ನಮಾಝ್ ವಂದಿಸಿದರು. ಅನ್ಸಾರ್ ಇನೋಳಿ ಕಾರ್ಯಕ್ರಮ ನಿರೂಪಿಸಿದರು.

“ಶೈಕ್ಷಣಿಕ ಜೀವನ‌ ಮುಗಿದ ಕೂಡಲೇ ತಾವು ಕಲಿತ ಶಾಲೆಯನ್ನು ಮರೆಯುವಂತಹ  ಇಂದಿನ ದಿನಗಳಲ್ಲಿ ಟಿಪ್ಪು ಸುಲ್ತಾನ್ ಸಂಸ್ಥೆಯ ವಿದ್ಯಾರ್ಥಿಗಳು ಇದಕ್ಕೆ ಅಪವಾದವಾಗಿದ್ದಾರೆ. ತಮ್ಮ ಶಿಕ್ಷಕರಿಗೆ ಪ್ರಶಸ್ತಿ ಬಂದಾಗ ಹಳೆ ವಿದ್ಯಾರ್ಥಿಗಳು ಮತ್ತೆ ಶಾಲೆಯಲ್ಲಿ ಒಂದುಗೂಡಿರುವುದು ಶ್ಲಾಘನೀಯ” – ಕೆ.ಎಂ.ಕೆ.ಮಂಜನಾಡಿ, ಹಳೆಕೋಟೆ ಸಯ್ಯದ್ ಮದನಿ ಶಿಕ್ಷಣ ಸಂಸ್ಥೆಯ ಮುಖ್ಯಶಿಕ್ಷಕ.

Join Whatsapp