ನೆರೆ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಲು ಮೂರು ಗಂಟೆಗಳ ಕಾದು ನಿಂತ ಮುಸ್ಲಿಮ್ ಮಹಿಳೆ ಸಾವು

Prasthutha|

ಹೈದರಾಬಾದ್: ನೆರೆ ಪರಿಹಾರದ ಮೊತ್ತ 10000 ರೂಪಾಯಿ ಪಡೆಯಲು ಅರ್ಜಿ ಸಲ್ಲಿಸುವುದಕ್ಕಾಗಿ ದೀರ್ಘ ಕಾಲ ಸರತಿಯಲ್ಲಿ ಕಾಯುತ್ತಿದ್ದ ಮಹಿಳೆಯೊಬ್ಬರು ದುರಂತ ಸಾವನ್ನಪ್ಪಿದ ಘಟನೆ ಸಂಭವಿಸಿದೆ.

- Advertisement -

ಗೋಲ್ಕಂಡಾದ ಹಕೀಮ್ ಪೇಟೆ ಪ್ರದೇಶದ ನಿವಾಸಿ 50ರ ಹರೆಯದ ಮುನವ್ವರುನ್ನಿಸಾ ಇಂದು ಬೆಳಗ್ಗೆ ತೌಲಿಚೌಕಿಯ ಗೆಲಾಕ್ಸಿ ಸಿನಿಮಾ ಮಂದಿರದ ಬಳಿಯಿರುವ ಮೀ-ಸೇವಾ ಕೇಂದ್ರಕ್ಕೆ ಬಂದಿದ್ದರು. ನೆರೆ ಪರಿಹಾರದ ಮೊತ್ತಕ್ಕಾಗಿ ಅರ್ಜಿ ಸಲ್ಲಿಸಲು ಆಕೆ ಮೂರು ಗಂಟೆಗಳ ಕಾಲ ಉದ್ದದ ಸಾಲಿನಲ್ಲಿ ನಿಂತಿದ್ದರು.

ತನ್ಮಧ್ಯೆ ಮುನವ್ವರುನ್ನಿಸಾ ಒಮ್ಮೆಲೇ ಕುಸಿದು ಬಿದ್ದರು. ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಪ್ರಯೋಜನವಾಗಲಿಲ್ಲ. ಮೂಲಗಳ ಪ್ರಕಾರ ಮಹಿಳೆ ದೇಹದಲ್ಲಿ ಆಮ್ಲಜನಕದ ಕೊರತೆಯುಂಟಾಗಿ ಕುಸಿದು ಬಿದ್ದು ಸಾವನ್ನಪ್ಪಿರಬಹುದು.

Join Whatsapp