ದೇಶವನ್ನು ಒಡೆಯಲು ಬಿಜೆಪಿಯಿಂದ ‘ಲವ್ ಜಿಹಾದ್’ ಪದದ ಸೃಷ್ಟಿ : ಅಶೋಕ್ ಗೆಹ್ಲೊಟ್

Prasthutha|

ಜೈಪುರ : ದೇಶವನ್ನು ಒಡೆಯಲು ಮತ್ತು ಕೋಮು ಸೌಹಾರ್ಧತೆ ಕೆಡಿಸಲು ಬಿಜೆಪಿ ‘ಲವ್ ಜಿಹಾದ್’ ಪದವನ್ನು ಸೃಷ್ಟಿಸಿದೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೊಟ್ ತಿಳಿಸಿದ್ದಾರೆ. ಅಲ್ಲದೆ, ‘ಲವ್ ಜಿಹಾದ್’ ಹೆಸರಲ್ಲಿ ಭಯವನ್ನು ಮಡುಗಟ್ಟಿಸುವ ಕ್ರಿಯೆಯಲ್ಲಿಯೂ ಅದು ನಿರತವಾಗಿದೆ.

- Advertisement -

ಆಡಳಿತ ಪಕ್ಷವು ಸಾಂವಿಧಾನಿಕ ನಿಯಮಗಳನ್ನು ಮತ್ತು ವೈವಾಹಿಕ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ವೈಯಕ್ತಿಕ ಸ್ವಾತಂತ್ರ್ಯವನ್ನು ಉಲ್ಲಂಘಿಸುತ್ತಿದೆ ಎಂದೂ ಅವರು ಆಪಾದಿಸಿದ್ದಾರೆ.

ಶುಕ್ರವಾರ ಮೂರು ಸರಣಿ ಟ್ವೀಟ್ ಗಳನ್ನು ಮಾಡಿರುವ ಗೆಹ್ಲೊಟ್, ‘ಲವ್ ಜಿಹಾದ್’ ಹೆಸರಲ್ಲಿ ಬಿಜೆಪಿಯ ರಾಜಕೀಯ ನಡೆಯನ್ನು ಕಟುವಾಗಿ ಟೀಕಿಸಿದ್ದಾರೆ.

- Advertisement -

ವಯಸ್ಕರು ತಮ್ಮ ವೈವಾಹಿಕ ಹಕ್ಕನ್ನು ರಾಜ್ಯ ಅಧಿಕಾರದ ದಯೆಯನ್ನು ಅವಲಂಬಿಸುವ ವಾತಾವರಣವನ್ನು ಬಿಜೆಪಿ ಸೃಷ್ಟಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

Love Jihad is a word manufactured by BJP to divide the Nation & disturb communal harmony. Marriage is a matter of personal liberty, bringing a law to curb it is completely unconstitutional & it will not stand in any court of law. Jihad has no place in Love.
1/— Ashok Gehlot (@ashokgehlot51) November 20, 2020

They are creating an environment in the nation where consenting adults would be at the mercy of state power. Marriage is a personal decision & they are putting curbs on it, which is like snatching away personal liberty.
2/— Ashok Gehlot (@ashokgehlot51) November 20, 2020

It seems a ploy to disrupt communal harmony, fuel social conflict & disregard constitutional provisions like the state not discriminating against citizens on any ground.
3/— Ashok Gehlot (@ashokgehlot51) November 20, 2020

Join Whatsapp