ಜಗತ್ಪ್ರಸಿದ್ಧ ಸಮಾಜ ಸೇವಕರಾದ ಭಾರತೀಯ ಸಹೋದರರು ದಕ್ಷಿಣ ಆಫ್ರಿಕಾದಲ್ಲಿ ಕೊರೊನಾಗೆ ಬಲಿ

Prasthutha|

ಜೊಹಾನ್ಸ್ ಬರ್ಗ್ : ದಕ್ಷಿಣ ಆಫ್ರಿಕಾದಲ್ಲಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದ, ತಮ್ಮ ಮಾನವೀಯ ಗುಣಗಳಿಗಾಗಿ ಖ್ಯಾತರಾಗಿದ್ದ ಭಾರತೀಯ ಮೂಲದ ಸಹೋದರರಿಬ್ಬರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಸಾಬೆರಿ ಚಿಶ್ತಿ ಸೊಸೈಟಿಯ ಅಧ್ಯಕ್ಷರಾಗಿದ್ದ ಅಬ್ಬಾಸ್ ಸಯೀದ್ ಮತ್ತು ಅವರ ಸಹೋದರ ಉಸ್ಮಾನ್ ಸಯೀದ್ ಶುಕ್ರವಾರ ಮತ್ತು ಶನಿವಾರ ಕೊನೆಯುಸಿರೆಳೆದಿದ್ದಾರೆ. ಇಬ್ಬರು ಸಹೋದರರ ಶವಸಂಸ್ಕಾರವನ್ನು ಅಕ್ಕಪಕ್ಕದಲ್ಲೇ ಮಾಡಲಾಗಿದೆ.

- Advertisement -

ಭಾರತ ಸೇರಿದಂತೆ ಜಗತ್ತಿನಾದ್ಯಂತದಿಂದ ಸಹೋದರರ ಸಾವಿಗೆ ಸಂತಾಪ ವ್ಯಕ್ತವಾಗಿದೆ. ದಕ್ಷಿಣ ಆಪ್ರಿಕಾದ ಲೆನಾಸಿಯಾದ ಭಾರತೀಯ ಟೌನ್ ಶಿಪ್ ನಲ್ಲಿ ಸಹೋದರರಿಬ್ಬರು ಸಮಾಜ ಸೇವೆಯನ್ನು ನಡೆಸುತ್ತಿದ್ದರು. ತಮ್ಮ ಹದಿಹರೆಯದಲ್ಲಿ ಅಬ್ಬಾಸ್ ಭಾರತದ ಅಜ್ಮೇರ್ ಗೆ ಭೇಟಿ ನೀಡಿದ್ದ ಬಳಿಕ, ಇಲ್ಲಿಂದ ಪ್ರೇರಣೆಗೊಂಡು ಲೆನಾಸಿಯಾಗೆ ತೆರಳಿ ತಮ್ಮ ಪ್ರದೇಶದಲ್ಲಿ ಸಮಾಜ ಸೇವೆ ಆರಂಭಿಸಿದ್ದರು. ಆರಂಭದಲ್ಲಿ ತಮ್ಮ ಮನೆಯಿಂದಲೇ ಸೇವೆ ಆರಂಭಿಸಿದ್ದ ಅಬ್ಬಾಸ್ ಬಳಿಕ, ಲೆನಸಿಯಾ ಪ್ರದೇಶದಲ್ಲಿ ಎಲ್ಲ ಸಮುದಾಯಗಳಿಗೆ ತಮ್ಮ ಸೇವೆ ವಿಸ್ತರಿಸಿದ್ದರು. ತಮ್ಮ ಕುಟುಂಬದ ಸದಸ್ಯರ ಸಂಪೂರ್ಣ ಸಹಕಾರ ಅವರು ಪಡೆದಿದ್ದರು. ಲೆನಸಿಯಾ ಪ್ರಾಂತ್ಯದಲ್ಲಿ ಸರಕಾರ ಒದಗಿಸಲಾಗದ ಸೇವೆಗಳನ್ನು ಅವರು ಜನತೆಗೆ ಒದಗಿಸಿದ್ದರು. ಹೀಗಾಗಿ ಅವರು ಜನಪ್ರಿಯರಾಗಿದ್ದರು.

Join Whatsapp