ಗುಪ್ಕರ್ ಮೈತ್ರಿ ಜಮ್ಮು ಕಾಶ್ಮೀರವನ್ನು ಮತ್ತೆ ಭಯೋತ್ಪಾದನೆಗೆ ಕರೆದೊಯ್ಯಲಿದೆ : ಅಮಿತ್ ಶಾ

Prasthutha|

ಗುಪ್ಕರ್ ಮೈತ್ರಿಕೂಟದ ವಿರುದ್ಧ ಗೃಹ ಸಚಿವ ಅಮಿತ್ ಶಾ ವಾಗ್ದಾಳಿ ನಡೆಸಿದ್ದಾರೆ. ಗುಪ್ಕರ್ ಮೈತ್ರಿ (gupkar alliance) ದಾರಿ ತಪ್ಪಿದ ಜಾಗತಿಕ ಮೈತ್ರಿ ಎಂದು ಗೃಹ ಸಚಿವ ಅಮಿತ್ ಶಾ ಆರೋಪಿಸಿದ್ದಾರೆ. ಈ ಮೈತ್ರಿಕೂಟವು ಜಮ್ಮು ಕಾಶ್ಮೀರಕ್ಕೆ ನುಸುಳಲು ಜಾಗತಿಕ ಶಕ್ತಿಗಳಿಗೆ ಅವಕಾಶ ನೀಡುವ ಉದ್ದೇಶವನ್ನು ಹೊಂದಿದೆ ಎಂದು ಅವರು ಹೇಳಿದರು. ಗುಪ್ಕರ್ ಮೈತ್ರಿಗೆ ದೇಶದ ಭಾವನೆಯೊಂದಿಗೆ ಈಜಬಹುದು ಅಥವಾ ಜನರು ಅದನ್ನು ಮುಳುಗಿಸಲಿದ್ದಾರೆ ಎಂದು ಅಮಿತ್ ಶಾ ಹೇಳಿದರು.

- Advertisement -

ಈ ಮೈತ್ರಿಯು ಜಮ್ಮು ಕಾಶ್ಮೀರವನ್ನು ಉಗ್ರಗಾಮಿ ಮತ್ತು ದಂಗೆಕೋರ ರಾಜ್ಯವನ್ನಾಗಿ ಮಾಡಲು ಪ್ರಯತ್ನಿಸುತ್ತಿದೆ ಎಂದು ಅವರು ಆರೋಪಿಸಿದರು. ಗುಪ್ಕರ್ ಮೈತ್ರಿಯು (people alliance for gupkar decleration) ಆರು ಪಕ್ಷಗಳ ಮೈತ್ರಿಯಾಗಿದೆ. ಕಾಶ್ಮೀರದ ವಿಶೇಷ ಸ್ಥಾನಮಾನವಾದ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿರುವುದನ್ನು ಮರುಸ್ಥಾಪಿಸುವ ಬೇಡಿಕೆಯೊಂದಿಗೆ ಈ ಮೈತ್ರಿಯು ರಚನೆಯಾಗಿದೆ.

ಅಧಿಕಾರಕ್ಕಾಗಿ ಯಾರೊಂದಿಗೂ ಕೈ ಜೋಡಿಸಲು ತಯಾರಾಗಿರುವ ಬಿಜೆಪಿ ತಮ್ಮನ್ನು ದೂಷಿಸುತ್ತಿದೆ ಎಂದು ಗುಪ್ಕರ್ ನಾಯಕರಾದ ಮೆಹಬೂಬಾ ಮುಫ್ತಿ ಮತ್ತು ಒಮರ್ ಅಬ್ದುಲ್ಲಾ ಆರೋಪಿಸಿದ್ದಾರೆ. ಮೈತ್ರಿ ರಚನೆಯಿಂದಾಗಿ ರಾಜಕೀಯ ಹಿನ್ನಡೆಯಾಗಲಿದೆ ಎಂದು ಅಮಿತ್ ಶಾ ಅಸಮಾಧಾನಗೊಂಡಿದ್ದಾರೆ ಎಂದು ಒಮರ್ ಅಬ್ದುಲ್ಲಾ ಹೇಳಿದ್ದಾರೆ. ಗುಪ್ಕರ್ ಮೈತ್ರಿಯನ್ನು ರಾಷ್ಟ್ರ ವಿರೋಧಿ ಎಂದು ಬಿಂಬಿಸಲು ಅಮಿತ್ ಷಾ ಸಂಚು ರೂಪಿಸುತ್ತಿದ್ದಾರೆ ಎಂದು ಮೆಹಬೂಬಾ ಮುಫ್ತಿ ಹೇಳಿದ್ದಾರೆ

Join Whatsapp