ಗುಜರಾತ್ ಉಪಚುನಾವಣೆ : ಮತದಾರರಿಗೆ ಹಣ ಹಂಚುತ್ತಿರುವ ಬಿಜೆಪಿ

Prasthutha|

- Advertisement -

ಹೊಸದಿಲ್ಲಿ : ಗುಜರಾತ್ ನಲ್ಲಿ ಉಪಚುನಾವಣೆ ನಡೆಯುತ್ತಿರುವ ವಡೋದರದಲ್ಲಿ ಬಿಜೆಪಿ ಕಾರ್ಯಕರ್ತರು ಮತದಾರರಿಗೆ ಹಣ ಹಂಚುತ್ತಿರುವುದು ವೀಡಿಯೋದಲ್ಲಿ ಬಹಿರಂಗಗೊಂಡಿದೆ. ವಡೋದರದ ಕರ್ಜಾನ್ ಕ್ಷೇತ್ರದ ಮತದಾರರಿಗೆ ಬಿಜೆಪಿ ನಾಯಕರು ಹಣವನ್ನು ಹಂಚಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಕಿರಿಲ್ ಸಿಂಗ್ ಜಡೇಜಾ ಅವರು ರಿಟರ್ನಿಂಗ್ ಅಧಿಕಾರಿಗೆ ದೂರು ನೀಡಿದ್ದಾರೆ. ಜಡೇಜಾ ಅವರ ಚುನಾವಣಾ ಏಜೆಂಟ್ ಉಪೇಂದ್ರ ಸಿಂಗ್ ರಾಣಾ ಅವರು ಬಿಜೆಪಿ ಅಭ್ಯರ್ಥಿ ಅಕ್ಷಯ್ ಪಟೇಲ್ ವಿರುದ್ಧ ದೂರು ದಾಖಲಿಸಿದ್ದಾರೆ.

ಕಾಂಗ್ರೆಸ್ ನ ದೂರಿನ ಮೇರೆಗೆ ಚುನಾವಣಾ ಆಯೋಗದ ನಿರ್ದೇಶನದಂತೆ ರಿಟರ್ನಿಂಗ್ ಅಧಿಕಾರಿ ವಿಚಾರಣೆ ನಡೆಸಲಿದ್ದಾರೆ. ಹಣ ನೀಡುವ ಎರಡು ವೀಡಿಯೋಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಅಕ್ಷಯ್ ಪಟೇಲ್ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಹಣವನ್ನು ಹಸ್ತಾಂತರಿಸುತ್ತಿದ್ದ ಬಿಜೆಪಿ ನಾಯಕರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ರಾಣಾ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಜೊತೆಗೆ ಎರಡು ಬೂತ್ ಗಳ ಮತದಾನವನ್ನು ರದ್ದುಗೊಳಿಸುವಂತೆ ಒತ್ತಾಯಿಸಲಾಗಿದೆ. ವೀಡಿಯೋಗಳಲ್ಲಿ ಕೇಸರಿ ಮಾಸ್ಕ್ ಧರಿಸಿ ಹಣ ನೀಡುತ್ತಾ ಬಿಜೆಪಿಗೆ ಮತ ಹಾಕಬೇಕೆಂದು ಕೇಳಲಾಗುತ್ತಿದೆ.

Join Whatsapp