ಕೋವಿಡ್-19 | ಏಕಾಏಕಿ ತೀವ್ರಗೊಂಡ ಮಹಿಳಾ ದೌರ್ಜನ್ಯ | ವಿಶ್ವಸಂಸ್ಥೆ

Prasthutha|

ಪ್ರಪಂಚದಾದ್ಯಂತ ಮಹಿಳೆಯರು, ಮಹಿಳೆಯರ ಮೇಲಿನ ದೌರ್ಜನ್ಯ ನಿರ್ಮೂಲನೆಗಾಗಿ ಅಂತರಾಷ್ಟ್ರೀಯ ದಿನವನ್ನು ಗುರಯಾಗಿಸಿಕೊಂಡಿದ್ದಾರೆ. ಲಾಕ್ಡೌನ್ ನಿಂದಾಗಿ ಗೃಹಬಂಧನದಲ್ಲಿ ಕಿರುಕುಳಕೋರರೊಂದಿಗೆ ಸಿಲುಕಿಕೊಂಡಿರುವ ಹಲವಾರು ಮಹಿಳೆಯರಿಗೆ ಇದು ಆಪತ್ತಾಗಿದೆ ಎಂಬುದನ್ನು ಎತ್ತಿ ತೋರಿಸಿದ್ದಾರೆ.

- Advertisement -

ಕೋವಿಡ್ ಬಿಕ್ಕಟ್ಟಿನ ನಂತರ ಮಹಿಳೆಯರು ಮತ್ತು ಹುಡುಗಿಯರ ಮೇಲಿನ ಎಲ್ಲಾ ರೀತಿಯ ಹಿಂಸಾಚಾರಗಳು, ವಿಶೇಷವಾಗಿ ಕೌಟುಂಬಿಕ ಹಿಂಸಾಚಾರಗಳು ತೀವ್ರಗೊಂಡಿವೆ ಎಂದು ವಿಶ್ವಸಂಸ್ಥೆ ಹೇಳಿದೆ.

“ಕಳೆದ ವರ್ಷ, 243 ಮಿಲಿಯನ್ ಮಹಿಳೆಯರು ಮತ್ತು ಹುಡುಗಿಯರು ತಮ್ಮ ಪಾಲುದಾರರಿಂದ ಲೈಂಗಿಕ ಮತ್ತು ದೈಹಿಕ ಹಿಂಸೆಯನ್ನು ಅನುಭವಿಸಿದ್ದಾರೆ. ಈ ವರ್ಷ ಕೌಟುಂಬಿಕ ಹಿಂಸೆ, ಸೈಬರ್ ಬೆದರಿಕೆ, ಬಾಲ್ಯ ವಿವಾಹಗಳು ಮತ್ತು ಲೈಂಗಿಕ ದೌರ್ಜನ್ಯದ ವರದಿಗಳು ಹೆಚ್ಚಾಗಿವೆ” ಎಂದು ವಿಶ್ವಸಂಸ್ಥೆ ಮಹಿಳಾ ನಿರ್ದೇಶಕಿ ಫುಮ್ಜೈಲ್ ಮಲಾಂಬೊ ಹೇಳಿದ್ದಾರೆ.

- Advertisement -

ಟರ್ಕಿಯ ಇಸ್ತಾಂಬುಲ್‌ನಲ್ಲಿ ಮಹಿಳೆಯರ ಮೇಲಿನ ಕೌಟುಂಬಿಕ ದೌರ್ಜನ್ಯದ ವಿರುದ್ಧ ಪ್ರತಿಭಟಿಸಲು ಹಲವಾರು ಜನರು ನೆರೆದಿದ್ದರು.

“ಮಹಿಳೆಯರನ್ನು ರಕ್ಷಿಸಬೇಕಾದ ಕಾನೂನು ರಕ್ಷಿಸುತ್ತಿಲ್ಲ. ನಮ್ಮ ಧ್ವನಿ ಅವರಿಗೆ ಕೇಳಲಿ ಉದ್ದೇಶದಿಂದ ಇಲ್ಲಿದ್ದೇವೆ. ಈ ದೇಶದಲ್ಲಿ ಪ್ರತಿದಿನವೂ ಸ್ತ್ರೀ ಹತ್ಯೆಗಳು ನಡೆಯುತ್ತಿವೆ ಆದರೆ ಅಪರಾಧಿಗಳು ಸ್ವಂತ್ರವಾಗಿ ಓಡಾಡುತ್ತಿದ್ದಾರೆ” ಎಂದು ಪ್ರತಿಭಟನೆಯಲ್ಲಿ ಭಾಗವಾಹಿಸಿದ್ದ ಓರ್ವ ಮಹಿಳೆ ಹೇಳಿದ್ದಾರೆ.

Join Whatsapp