ಕೋವಿಡ್ ಸಾವಿನಲ್ಲಿ ಮೂರನೇ ಸ್ಥಾನಕ್ಕೆ ಭಾರತ ; ದೇಶದಲ್ಲಿ ಒಂದು ಲಕ್ಷ ದಾಟಿದ ಸಾವಿನ ಸಂಖ್ಯೆ

Prasthutha|

ದೇಶದಲ್ಲಿ ಕೋವಿಡ್ ಗೆ ಬಲಿಯಾದವರ ಸಂಖ್ಯೆ ಒಂದು ಲಕ್ಷ ದಾಟಿದೆ. ಒಂದು ಲಕ್ಷಕ್ಕೂ ಹೆಚ್ಚು ಕೋವಿಡ್ ಸಾವುಗಳನ್ನು ವರದಿ ಮಾಡಿದ ಮೂರನೇ ದೇಶ ಭಾರತ. ಕಳೆದ 24 ಗಂಟೆಗಳಲ್ಲಿ ಒಂದು ಸಾವಿರಕ್ಕೂ ಹೆಚ್ಚು ಸಾವುಗಳು ವರದಿಯಾಗಿವೆ. 80,000 ಮಂದಿಗೆ ಕೋವಿಡ್ ದೃಢಪಟ್ಟಿದೆ. ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 64.5 ಲಕ್ಷ ದಾಟಿದೆ. 9.5 ಲಕ್ಷಕ್ಕಿಂತ ಕಡಿಮೆ ಜನರು ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ.

- Advertisement -

ಮಾರ್ಚ್ 13 ರಂದು ದೇಶದಲ್ಲಿ ಮೊದಲ ಕೋವಿಡ್ ಸಾವು ವರದಿಯಾಗಿತ್ತು. 125 ದಿನಗಳ ನಂತರ,ಜುಲೈ 16 ಕ್ಕೆ ಕೋವಿಡ್ ಸಾವು 25000ಕ್ಕೆ ಏರಿತ್ತು. ಒಂದು ತಿಂಗಳ ನಂತರ ಆಗಸ್ಟ್ 15ರಂದು ಸಾವಿನ ಸಂಖ್ಯೆ 50,000ಕ್ಕೆ ಏರಿತು. 25 ದಿನಗಳಲ್ಲಿ ಸೆಫ್ಟೆಂಬರ್ 9ರಂದು ಕೋವಿಡ್ ಸಾವು 75,000 ಆಗಿತ್ತು. ಈಗ ಕೋವಿಡ್ ಸಾವು ಒಂದು ಲಕ್ಷ ದಾಟಿದೆ.

ಇದರೊಂದಿಗೆ ವಿಶ್ವದಲ್ಲಿ ಕೋವಿಡ್ ನಿಂದ ಉಂಟಾದ ಸಾವುಗಳಲ್ಲಿ ಹತ್ತನೇ ಒಂದು ಭಾಗ ಭಾರತೀಯರದ್ದು. ಕಳೆದ ಒಂದು ತಿಂಗಳಿನಿಂದ ಭಾರತದಲ್ಲಿ ದೈನಂದಿನ ಸಾವಿನ ಸಂಖ್ಯೆ ಸಾವಿರಕ್ಕಿಂತಲೂ ಹೆಚ್ಚಾಗತೊಡಗಿದೆ. ಕೋವಿಡ್ ಸಾವಿನಲ್ಲಿ ಅಮೇರಿಕ ಮತ್ತು ಬ್ರೆಝಿಲ್ ಬಾರತಕ್ಕಿಂತ ಮುಂದಿದೆ. ಅಮೇರಿಕಾದ ನಂತರ ರೋಗ ಬಾಧಿತರ ಸಂಖ್ಯೆಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ಬ್ರೆಝಿಲ್ ಮೂರನೇ ಸ್ಥಾನದಲ್ಲಿದೆ.

Join Whatsapp