ಕೇವಲ 17 ನಿಮಿಷದಲ್ಲಿ 48 ಕೊರೊನಾ ಕೇಸ್ ತಪಾಸಣೆ ಮಾಡಬಲ್ಲ ತಂತ್ರಜ್ಞಾನ ಈಗ ಲಭ್ಯ!

Prasthutha|

ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸೋಂಕಿತರ ಗಂಟಲು ದ್ರವ ಪರೀಕ್ಷೆ ಪ್ರಮಾಣವೂ ಹೆಚ್ಚುತ್ತಿದೆ. ಹೀಗಾಗಿ ಈಗ ದಕ್ಷಿಣ ಕೊರಿಯಾ ಮೂಲದ ಜಿನೊಲ್ಯುಶನ್ ಮತ್ತು ಪ್ರೇಮಾಸ್ ಲೈಫ್ ಸೈನ್ಸಸ್ ಕಂಪೆನಿ ಭಾರತದಲ್ಲಿ ಕೇವಲ 17 ನಿಮಿಷದಲ್ಲಿ 48 ಮಾದರಿಗಳ ಪರೀಕ್ಷೆ ವರದಿ ನೀಡುವ ತಂತ್ರಜ್ಞಾನವನ್ನು ಜಾರಿಗೊಳಿಸಲು ಮುಂದಾಗಿವೆ.

- Advertisement -

ಭಾರತದಲ್ಲಿ ನೆಕ್ಸ್ ಟ್ರಾಕ್ಟರ್ ಎನ್ ಎಕ್ಸ್ 48ಎಸ್ ವಿತರಣೆಗೆ ಪ್ರೇಮಾಸ್ ಲೈಫ್ ಸೈನ್ಸಸ್ ಮತ್ತು ಜಿನೊಲ್ಯುಶನ್ ಒಪ್ಪಂದಕ್ಕೆ ಸಹಿ ಮಾಡಿವೆ. ನೆಕ್ಸ್ ಟ್ರಾಕ್ಟರ್ ಎನ್ ಎಕ್ಸ್ 48 ಎಸ್ ಸಂಪೂರ್ಣ ನ್ಯೂಕ್ಲಿಕ್ ಆ್ಯಸಿಡ್ ಎಕ್ಸ್ ಟ್ರಾಕ್ಷನ್ ವ್ಯವಸ್ಥೆ ಹೊಂದಿದೆ. ಇದು ಕೇವಲ 17 ನಿಮಿಷದಲ್ಲಿ 48 ಮಾದರಿಗಳ ವರದಿ ನೀಡಬಲ್ಲದು. ಕೊರೊನಾ ತಪಾಸಣೆ ವ್ಯಾಪಕವಾಗುತ್ತಿರುವ ದೇಶಗಳಲ್ಲಿ ಇದನ್ನು ಬಳಸಲಾಗಿದೆ. ಭಾರತದಲ್ಲೂ ಈಗಾಗಲೇ ಇಂತಹ 30 ಯೂನಿಟ್ ಗಳಿವೆ.

ನೆಕ್ಸ್ ಟ್ರಾಕ್ಟರ್ ಎನ್ ಎಕ್ಸ್ 8 ಎಸ್ ಹೆಚ್ಚು ಗುಣಮಟ್ಟದ ವರದಿ ನೀಡುತ್ತದೆ ಮತ್ತು ಸಮಯದ ಉಳಿತಾಯ ತುಂಬಾ ಮಾಡುತ್ತದೆ. ಅಲ್ಲದೆ, ವರದಿಗಳನ್ನು ನೀಡುವಾಗ ಕಣ್ತಪ್ಪಿನಿಂದ ಆಗಬಹುದಾದ ತಪ್ಪುಗಳನ್ನು ನಿವಾರಿಸಿ, ನಿಖರ ವರದಿಯನ್ನು ಇದು ಒದಗಿಸುತ್ತದೆ.

Join Whatsapp