ಕೇಂದ್ರ ಮತ್ತು ರಾಜ್ಯ ಸರಕಾರಗಳನ್ನು ಹಿಂದುತ್ವವಾದಿಯೆಂದು ಬಣ್ಣಿಸಿದ ಶಾಸಕನ ವಿರುದ್ಧ ಕೇಸು ದಾಖಲು

Prasthutha|

- Advertisement -

ಭೋಪಾಲ್ : ಧಾರ್ಮಿಕ ಭಾವನೆಗಳನ್ನು ಅವಮಾನಿಸಿದ ಆರೋಪದ ಮೇಲೆ ಭೋಪಾಲ್ ನಲ್ಲಿ ಕಾಂಗ್ರೆಸ್ ಶಾಸಕ ಆರಿಫ್ ಮಸೂದ್ ವಿರುದ್ಧ ಪ್ರಕರಣ ದಾಖಲಾಗಿದೆ. ಭೋಪಾಲ್ ನ ತಲಯ್ಯಾ ಪೊಲೀಸ್ ಠಾಣೆಯಲ್ಲಿ ಶಾಸಕ ಮತ್ತು ಪ್ರತಿಭಟನೆಯಲ್ಲಿ ಭಾಗವಹಿಸಿದ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಪೊಲೀಸರು ಜಾಮೀನು ರಹಿತ ಪ್ರಕರಣ ದಾಖಲಿಸಿದ್ದಾರೆ. ಸೆಕ್ಷನ್ 153ಎ ಅಡಿಯಲ್ಲಿ ಎಲ್ಲರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಮುಸ್ಲಿಂ ವಿರೋಧಿ ಹೇಳಿಕೆ ನೀಡಿದ್ದ ಫ್ರೆಂಚ್ ಅಧ್ಯಕ್ಷರನ್ನು ಬೆಂಬಲಿಸಿದ ಕೇಂದ್ರ ಸರಕಾರದ ಕ್ರಮವನ್ನು ವಿರೋಧಿಸಿ ನಡೆದ ಪ್ರತಿಭಟನಾ ರಾಲಿಯಲ್ಲಿ ಶಾಸಕರು, ಕೇಂದ್ರ ಮತ್ತು ರಾಜ್ಯ ಸರಕಾರಗಳನ್ನು ಹಿಂದುತ್ವವಾದಿಗಳೆಂದು ಕರೆದಿದ್ದರು. ಧರ್ಮ ಸಂಸ್ಕೃತ್ ಸಮಿತಿಯ ನಾಯಕ ದೀಪಕ್ ರಘುವಂಶಿಯ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರತಿಭಟನೆಯ ಭಾಗವಾಗಿ ಶಾಸಕ ಮತ್ತು ಕಾರ್ಯಕರ್ತರು ಫ್ರಾನ್ಸ್ ಪ್ರಧಾನ ಮಂತ್ರಿಯ ಪ್ರತಿಕೃತಿ ಮತ್ತು ಫ್ರಾನ್ಸ್ ಧ್ವಜವನ್ನು ದಹಿಸಿದ್ದರು.

- Advertisement -

ಸೆಕ್ಷನ್ 153ಎ ಅಡಿಯಲ್ಲಿ ಶಾಸಕ ಮತ್ತು ಇತರ ಕಾರ್ಯಕರ್ತರಿಗೆ ಜಾಮೀನು ರಹಿತ ಪ್ರಕರಣ ದಾಖಲಿಸಲಾಗಿದೆ ಎಂದು ಭೋಪಾಲ್ ಐಜಿ ಉಪೇಂದ್ರ ಜೈನ್ ಹೇಳಿದ್ದಾರೆ. ಇಸ್ಲಾಮ್ ಧರ್ಮ ಫ್ರಾನ್ಸಿನಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಬಿಕ್ಕಟ್ಟಿನಿಂದ ಕೂಡಿದ ಧರ್ಮವಾಗಿದೆ ಎಂಬ ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುವೆಲ್ ಮ್ಯಾಕ್ರನ್ ನ ಹೇಳಿಕೆಯು ವಿಶ್ವದಾದ್ಯಂತ ಭಾರೀ ಪ್ರತಿಭಟನೆಗೆ ಕಾರಣವಾಗಿತ್ತು.

Join Whatsapp