ಕಾಸರಗೋಡು-ಮಂಗಳೂರು ಗಡಿ ತೆರವಿಗೆ ಕೇರಳ ಹೈಕೋರ್ಟ್ ಆದೇಶ

Prasthutha|


ತಿರುವನಂತಪುರಂ : ಕೇರಳ-ಕರ್ನಾಟಕ ಸಂಪರ್ಕಿಸುವ ಪ್ರಮುಖ ನಾಲ್ಕು ರಸ್ತೆಗಳ ಗಡಿಗಳನ್ನು ತೆರವುಗೊಳಿಸುವಂತೆ ಕೇರಳ ಹೈಕೊರ್ಟ್ ಆದೇಶಿಸಿದೆ. ಕೇಂದ್ರ ಸರಕಾರ ಅಂತಾರಾಜ್ಯ ರಸ್ತೆಗಳ ಬಂದ್ ತೆರವುಗೊಳಿಸುವಂತೆ ಆದೇಶಿಸಿತ್ತು. ಆದರೆ, ಕೇರಳ-ಕರ್ನಾಟಕ ಗಡಿ ಬಂದ್ ಅನ್ನು ತೆರವು ಮಾಡಿರಲಿಲ್ಲ.

- Advertisement -

ಕಾಸರಗೋಡಿನ ವಕೀಲ ಕೆ. ಶ್ರೀಕಾಂತ್ ಹೈಕೋರ್ಟ್ ಗೆ ಸಲ್ಲಿಸಿದ್ದ ಅರ್ಜಿಗೆ ಪ್ರತಿಯಾಗಿ, ಕೋರ್ಟ್ ಈ ಆದೇಶ ನೀಡಿದೆ. ಕಾಸರಗೋಡು-ದಕ್ಷಿಣ ಕನ್ನಡ ಸಂಪರ್ಕಿಸುವ ಜಾಲ್ಸೂರು, ಪಾಣತ್ತೂರು, ಪೆರ್ಲ ಗಡಿಗಳಲ್ಲಿ ಹಾಕಿರುವ ಬಂದ್ ತೆರವುಗೊಳಿಸಬೇಕೆಂದು ಕೋರ್ಟ್ ಆದೇಶದಲ್ಲಿ ತಿಳಿಸಲಾಗಿದೆ.

ಇದರಿಂದಾಗಿ ಕಾಸರಗೋಡು-ಮಂಗಳೂರು ಸಂಚಾರಕ್ಕೆ ಇದ್ದ ತೊಡಕು ಈಗ ನಿವಾರಣೆಯಾಗಿದೆ.

- Advertisement -

ಕೊರೋನ ನಿಯಂತ್ರಣಕ್ಕಾಗಿ ಕೇರಳ-ಕರ್ನಾಟಕ ಗಡಿ ಬಂದ್ ಮಾಡಲಾಗಿತ್ತು. ಇದರಿಂದಾಗಿ ಮುಖ್ಯವಾಗಿ ಕಾಸರಗೋಡು-ಮಂಗಳೂರು ಸಂಪರ್ಕ ಕಡಿತವಾಗಿತ್ತು. ಇದರಿಂದ ಉಭಯ ಜಿಲ್ಲೆಗಳ ಜನರಿಗೆ ಸಂಚಾರಕ್ಕೆ ಅಡ್ಡಿಯಾಗಿತ್ತು.

ಫೋಟೊ ಕೃಪೆ : ಸ್ಕ್ರಾಲ್ ಡಾಟ್ ಇನ್

Join Whatsapp