ಕಾರ್ಮಿಕ ಕಾನೂನುಗಳನ್ನು ದಫನಗೈಯ್ಯುತ್ತಿರುವ ಬಿಜೆಪಿ

Prasthutha|

- Advertisement -

ಕೊರೋನ ವೈರಸ್ ಜನರ ಕತ್ತನ್ನು ಅಮುಕಿದಾಗ ಜನಸಾಮಾನ್ಯರು ರೋಗಿಗಳಿಗೆ ನೆರವಾಗಲು, ಪರಸ್ಪರ ಸಹಕರಿಸಲು, ನಿರುದ್ಯೋಗಿಗಳಿಗೆ ಆಹಾರ-ವಸತಿ ಕಲ್ಪಿಸಲು ಮೊದಲಾಗಿ ಪ್ರಯತ್ನಿಸಿದರು. ದಕ್ಷಿಣ ಭಾರತದ ಅದರಲ್ಲೂ ಕೇರಳ, ಕರ್ನಾಟಕ, ತಮಿಳುನಾಡು, ಆಂಧ್ರ, ತೆಲಂಗಾಣದಲ್ಲಿ ಇರುವ ವಲಸೆ ಕಾರ್ಮಿಕರಿಗೆ ಸರಕಾರಗಳು ಆಹಾರ, ವಸತಿ ಸೌಕರ್ಯ ನೀಡಿದವು. ಸರಕಾರವು ಸ್ಥಳೀಯಾಡಳಿತ ಮತ್ತಿತರ ಸಂಸ್ಥೆಗಳೊಂದಿಗೆ ಸೇರಿಕೊಂಡು ಸಾರ್ವಜನಿಕ ಪಾಕಶಾಲೆಯನ್ನು ನಿರ್ಮಿಸಿ   ಹಸಿವು ತಣಿಸಲು ಮುಂದಾಯಿತು.

 ಸಾಮಾನ್ಯವಾಗಿ ಸರಕಾರ ಯಾವುದೇ ಇದ್ದರೂ ಜನರು ಅದನ್ನೇ ನಿರೀಕ್ಷಿಸುತ್ತಾರೆ. ಸರಕಾರ ಎಂಬುದು ಜನರಿಗಾಗಿ ಇರುವಂತಹದ್ದಲ್ಲವೇ? ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜನರ ಕ್ಷೇಮಕ್ಕಾಗಿ ಆದ್ಯತೆಯನ್ನು ನೀಡಲು ಎಲ್ಲಾ ಸರಕಾರಗಳು ತಯಾರಾಗಬೇಕು. ಆದರೆ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರಕಾರವು ಕಾರ್ಮಿಕರೊಂದಿಗೆ ಬಹಳ ನಿರ್ದಯವಾಗಿ ವರ್ತಿಸಿತು. ದಕ್ಷಿಣ ಭಾರತದಲ್ಲಿರುವ ಕಾರ್ಮಿಕರಲ್ಲಿ ಬಹುಸಂಖ್ಯಾತ ಮಂದಿ ಹರಿದು ಬರುತ್ತಿರುವುದು ಯೋಗಿಯ ರಾಜ್ಯವಾದ ಯುಪಿಯಿಂದ? ಮಹಾರಾಷ್ಟ್ರ, ಪಂಜಾಬ್ ಮತ್ತು ಕೇರಳ, ಕರ್ನಾಟಕ ಮೊದಲಾದ ರಾಜ್ಯಗಳಲ್ಲಿ ಬೇಸಾಯಕ್ಕೆ, ಹೆದ್ದಾರಿಯ ಕಾಮಗಾರಿಗೆ ಉತ್ತರ ಪ್ರದೇಶದಿಂದ ಕೂಲಿ ಕಾರ್ಮಿಕರು ಬರುತ್ತಾರೆ. ಅವರ ರಾಜ್ಯದಲ್ಲಿ ಸರಿಯಾದ ಉದ್ಯೋಗ ಇರದಿರುವುದೇ ಇದಕ್ಕಿರುವ ಮುಖ್ಯ ಕಾರಣ. ಆದ್ದರಿಂದಲೇ ಉದ್ಯೋಗವನ್ನರಸಿ ಯುವಕರು ಭಾರತದ ನಾನಾ ಭಾಗಗಳಿಗೆ ವಲಸೆ ಹೋಗುತ್ತಿದ್ದಾರೆ.  ಮೈಮುರಿದು ಕೆಲಸ ಮಾಡುವ ಇವರಿಗೆ ಸಿಗುವ ಹಣವನ್ನೆಲ್ಲಾ ಕುಟುಂಬ  ಸಾಕಿ ಸಲಹಲು ಕಳಿಸುತ್ತಾರೆ. ಮಾರುಕಟ್ಟೆಯಿಂದ ಏನನ್ನು ಖರೀದಿಸಿದರೂ ಅದರ ಒಂದು ಭಾಗವು ತೆರಿಗೆಯ ರೂಪದಲ್ಲಿ ರಾಜ್ಯ ಸರಕಾರಗಳಿಗೆ ಸಿಗುತ್ತಲಿದೆ. ಹೀಗೆ ಸಿಗುವ ತೆರಿಗೆಯ ಹಣದಿಂದ ಯೋಗಿ ಅಡಳಿತ ವೈಭವವನ್ನು ನಡೆಸುತ್ತಿದ್ದಾರೆ?

- Advertisement -

 ಹೀಗಿದ್ದೂ ಯೋಗಿ ಮತ್ತು ಅವರ ಕೂಟವು ತಮ್ಮ ರಾಜ್ಯಕ್ಕೆ ಹಿಂದಿರುಗಿದ ಕಾರ್ಮಿಕರನ್ನು ಯಾವ ರೀತಿ ಸ್ವೀಕರಿಸಿದರು? ಅವರ ಸಂಕಷ್ಟಗಳನ್ನು ಪರಿಹರಿಸಲು ಉತ್ತರ ಪ್ರದೇಶದಲ್ಲಿ ಯಾವ ರೀತಿಯ ಕ್ರಮಗಳನ್ನು ಕೈಗೊಂಡರು? ಇಷ್ಟೊಂದು ಸಮಯ ರಾಜ್ಯದಿಂದ ಹೊರಗಿದ್ದು, ಶ್ರಮ ವಹಿಸಿ ದುಡಿಯುತ್ತಿರುವ ಅವರ ಹಣವನ್ನೆಲ್ಲವನ್ನೂ ಊರಿಗೆ ಕಳುಹಿಸಿದ ಈ ಜನರಿಗೆ ತಮ್ಮ ಸ್ವಂತ ರಾಜ್ಯದಲ್ಲಿ ಸಿಕ್ಕಿದ್ದಾದರೂ ಏನು?

 ಹಸಿವಿಗೆ ತಳ್ಳುವ ಯೋಗಿ ಸರಕಾರ:

 ಸಂಘಪರಿವಾರದ ಆಡಳಿತವು ಎಷ್ಟೊಂದು ಜನವಿರೋಧಿ ಮತ್ತು ಕಾರ್ಮಿಕ ವಿರೋಧಿ ಎಂಬುದನ್ನು ಈ ಬಗ್ಗೆ ಆಲೋಚಿಸಿದರೆ ತಿಳಿದುಕೊಳ್ಳಬಹುದು.  ಯೋಗಿ ಆದಿತ್ಯನಾಥ್ ಹೇಳಿದಂತೆ, ಇನ್ನೇನಾದರೂ ಯಾರಿಗಾದರೂ ಯುಪಿಯಿಂದ ಕಾರ್ಮಿಕರು ಬೇಕಾಗಿದ್ದರೆ ಅವರು ಮುಂಚಿತವಾಗಿ ಯುಪಿ ಸರಕಾರದೊಂದಿಗೆ ಅನುಮತಿಯನ್ನು ಪಡೆಯಬೇಕು. ಇಲ್ಲದಿದ್ದರೆ ಅವರಿಗೆ ಕಾರ್ಮಿಕರು ಸಿಗಲಾರರು? ಮಹಾರಾಷ್ಟ್ರಲ್ಲಿ ಮಣ್ಣಿನ ಮಕ್ಕಳ ವಾದವನ್ನು ಹೊಂದಿದ ಶಿವಸೇನೆ ಇದೀಗ ಆಡಳಿತದಲ್ಲಿದೆ. ಆದ್ದರಿಂದ ಅವರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಯೋಗಿಯೊಂದಿಗೆ ಹೆಚ್ಚೇನೂ ಹೇಳಲಿಲ್ಲ. ಆದರೆ ಶಿವಸೇನೆಯಿಂದ ಸಿಡಿದು ಹೋದ ಮಹಾರಾಷ್ಟ್ರ ನವ ನಿರ್ಮಾಣ್ ಸೇನೆ ಹೇಳುವುದೇನೆಂದರೆ, ಇನ್ನು ಯುಪಿ ಕಾರ್ಮಿಕರು ಮಹಾರಾಷ್ಟ್ರಕ್ಕೆ ಬರಲಿ ತೋರಿಸಿ ಕೊಡುತ್ತೇವೆ ಎಂದು. ಅದೇ ವೇಳೆ ಯುಪಿಯಲ್ಲಿ ಕಾರ್ಮಿಕರಿಗೆ ದುಡಿಮೆಯಿಲ್ಲ. ಅವರಿಗೆ ಉದ್ಯೋಗ ಲಭಿಸುವ ಊರುಗಳಲ್ಲಿ ಅವರನ್ನು ಏಕಾಂಗಿಯಾಗಿಸುವ ಡಯಲಾಗ್‌ಗಳನ್ನು ಇವರು ಹೊಡೆಯುತ್ತಿದ್ದಾರೆ. ಯೋಗಿ ಮಾಡುತ್ತಿರುವುದು ಇದನ್ನೇ.

 ಶೋಷಣೆಯ ಸುಗ್ರೀವಾೆ:

 ಯೋಗಿ ಆದಿತ್ಯನಾಥ್ ಮತ್ತು ಗುಂಪು ಯುಪಿಯಲ್ಲಿ ನಡೆಸುತ್ತಿರುವ ಆಡಳಿತದ ನೈಜ ಬಣ್ಣವನ್ನು ಸದ್ಯದ ದಿನಗಳಲ್ಲಿ ಜನರು ಕಂಡರು. ಯುಪಿ ಸರಕಾರ ಹೆಚ್ಚುಕಡಿಮೆ ವಾರಗಳಿಗೆ ಮುಂಚೆ ಹೊರಡಿಸಿದ ಸುಗ್ರೀವಾಜ್ಞೆಯೊಂದು ಇಂದು ಕುಪ್ರಸಿದ್ಧವಾಗಿ ಮಾರ್ಪಟ್ಟಿದೆ? ಪ್ರಪಂಚದ ಯಾವುದೇ ಭಾಗಗಳಲ್ಲಿ ಕಾರ್ಮಿಕರಿಗೆ ಇರುವ ಯಾವುದೇ ಹಕ್ಕುಗಳನ್ನು ಇನ್ನು ಮುಂದಿನ ಮೂರು ವರ್ಷಗಳ ವರೆಗೆ ಯುಪಿಯಲ್ಲಿ ದುಡಿಯುವ ಕಾರ್ಮಿಕರಿಗೆ ನೀಡಲಾಗುವುದಿಲ್ಲ ಎಂದು ಸರಕಾರ ಸುಗ್ರೀವಾಜ್ಞೆಯ ಮೂಲಕ ತಿಳಿಸುತ್ತಿದೆ. ಅದರ ಪ್ರಕಾರ, ಕಾರ್ಮಿಕರಿಗೆ ಸಾಮಾನ್ಯವಾಗಿ ಅನ್ವಯಿಸುವ ಎಂಟು ಗಂಟೆಗಳ ದುಡಿಮೆ, ಮಹಿಳಾ ಕಾರ್ಮಿಕರಿಗೆ ಅರ್ಹವಾಗಿರುವ ಹೆರಿಗೆಯ ಸೌಕರ್ಯಗಳು, ಚೌಕಾಶಿ ಕೂಲಿಯನ್ನು ದೃಢಪಡಿಸುವ ಸ್ವಾತಂತ್ರ್ಯ ಮೊದಲಾದವುಗಳನ್ನು ರದ್ದುಪಡಿಸಲಾಗಿದೆ. ರಾಜ್ಯದಲ್ಲಿ ಒಟ್ಟಾಗಿ ಇದೀಗ ದುಡಿಮೆಯನ್ನು ಕಳೆದುಕೊಳ್ಳುತ್ತಿರುವ ಘಟನೆಗಳು ಸರಣಿಯಂತೆ ಮುಂದುವರಿಯುತ್ತಿದೆ. ಈ ಮಧ್ಯೆ, ಈಗಿರುವ ದುಡಿಮೆಗಳಲ್ಲೂ ಇನ್ನು ಕಾರ್ಮಿಕರಿಗೆ ಭದ್ರತೆ ಇಲ ಎಂದು ಯೋಗಿ ಆಡಳಿತ ಹೇಳಿದೆ.

 ಇನ್ನು ಮುಂದೆ ಉದ್ಯೋಗಾವಕಾಶಗಳು ಲಭಿಸಿದರೂ ಶ್ರೀಮಂತರಿಗೆ, ಮಾಲೀಕರಿಗೆ, ಕಾರ್ಮಿಕರನ್ನು ಶೋಷಣೆಗೈಯ್ಯುವ ಮತ್ತಷ್ಟು ಅವಕಾಶ ದೊರಕಲಿದೆ. ಎಂಟು ಗಂಟೆಗಳ ದುಡಿಮೆ ಮತ್ತು ಟ್ರೇಡ್ ಯೂನಿಯನ್ ಹಕ್ಕುಗಳನ್ನು ಕಾರ್ಮಿಕರು ಅದೆಷ್ಟೋ ಕಾಲದ ಹಿಂದಿನಿಂದ ಹೋರಾಟಗಳನ್ನು ಮಾಡಿ ಪಡೆದುಕೊಂಡ ಹಕ್ಕುಗಳಾಗಿವೆ. ಅದರಲ್ಲಿ ಯುಪಿ ಸರಕಾರ ಹಸ್ತಕ್ಷೇಪ ನಡೆಸುತ್ತಿದೆ. ಯುಪಿ ಸರಕಾರ ಮಾತ್ರವಲ್ಲ, ಬಿಜೆಪಿ ಆಡಳಿತವಿರುವ ಮಧ್ಯಪ್ರದೇಶ, ಗುಜರಾತ್ ಮೊದಲಾದ ಇನ್ನಿತರ ರಾಜ್ಯಗಳಲ್ಲೂ ಈ ರೀತಿಯ ಕಾನೂನುಗಳನ್ನು ಇತ್ತೀಚೆಗೆ ಸುಗ್ರೀವಾಜ್ಞೆಯ ಮೂಲಕ ತರಲಾಗಿದೆ. ವಿಧಾನ ಸಭೆಗಳಲ್ಲಿ ಚರ್ಚೆಯನ್ನು ನಡೆಸದೆ  ವಿವಿಧ ಸರಕಾರಗಳು ಕಾರ್ಮಿಕ ವಿರೋಧಿ ಕಾನೂನುಗಳನ್ನು ಜಾರಿಗೆ ತರುತ್ತಿವೆ.

 ಸರಕಾರ ಇದಕ್ಕೆ ಹೇಳುವ ಸಮರ್ಥನೆ; ಇನ್ನು ಇನ್ನಷ್ಟು ಉದ್ಯೋಗಾವಕಾಶಗಳು ಸೃಷ್ಟಿಸಬೇಕಾದರೆ ಕಾರ್ಮಿಕರನ್ನು ಹಿಂಡುವ ಅವಕಾಶವನ್ನು ಮಾಲೀಕರಿಗೆ ನೀಡಬೇಕು ಎಂಬುದಾಗಿದೆ. ಯಾವ ಮಾಲೀಕನು ಯೋಗಿ ಮತ್ತು ಗುಂಪಿನೊಂದಿಗೆ ಈ ರೀತಿ ಕೇಳಿಕೊಂಡಿದ್ದರು? ಕಾರ್ಮಿಕರಿಗೆ ಉದ್ಯೋಗಕ್ಕೆ ಪೂರಕವಾದ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುವ ಸೌಕರ್ಯಗಳನ್ನು ಒದಗಿಸಬೇಕೆಂದು ಹಲವು ಮಾಲೀಕರು ಆಗ್ರಹಿಸಿದ್ದಾರೆ.  ತೆರಿಗೆಯ ಪರಿಷ್ಕರಣೆ ಮತ್ತು ಕಡಿತವನ್ನು ಹಲವರು ಕೇಳಿದ್ದಾರೆ? ಆದರೆ ಕಾರ್ಮಿಕರನ್ನು ಹಿಂಡುವ ಸೌಕರ್ಯವನ್ನು ಯಾರೂ ಕೇಳಿದ್ದಿಲ್ಲ. ಆದರೆ ಸರಕಾರ ಅದನ್ನು ಉದ್ಯಮವನ್ನು ಪ್ರೋತ್ಸಾಹಿಸುವ ರೀತಿಯಲ್ಲಿ ಮುಂದಿರಿಸಿದ ನಿಲುವುಗಳಾಗಿದೆ.

 ಕಾರ್ಮಿಕ ಶೋಷಣೆಯ ಕರಾಳ ದಿನಗಳು:

 9ನೇ ಶತಮಾನದಲ್ಲಿ ಅತ್ಯಂತ ಭೀಕರವಾದ ಕಾರ್ಮಿಕ ವಿರೋಧಿ ಕಾನೂನುಗಳ ಕಾಲದ ಅನುಭವಗಳನ್ನು ಹಲವು ಬರಹಗಾರರು ಸೂಚಿಸಿದ್ದಾರೆ. ಚಾರ್ಲ್ಸ್ ಡಿಕನ್ಸ್‌ನ ಧಾರಾವಾಹಿಗಳಲ್ಲಿ ಅದರ ಭೀಕರ ಮುಖವು ಬಹಿರಂಗಗೊಳ್ಳುತ್ತದೆ? ಮಕ್ಕಳನ್ನು ಶೋಷಣೆಗೈಯ್ಯುವ ಒಂದು ಸಮಾಜದ ಕರಾಳ ಚಿತ್ರವನ್ನು ‘ಒಲಿವರ್ ಟ್ವಿಸ್ಟ್ಟ್ಟ್’ ನಲ್ಲಿ ನಮಗೆ ನೋಡಲು ಸಾಧ್ಯವಿದೆ.  ‘ಹಾರ್ಡ್ ಟೈಮ್ಸ್’ ಕಾರ್ಮಿಕ ಶೋಷಣೆಯ ಲಜ್ಜೆಗೆಟ್ಟ ಕಾಲದ ಇನ್ನೊಂದು ಚಿತ್ರವಾಗಿದೆ. ಈ ಕಥೆಯನ್ನು ದಿಕನ್ಸ್ ಚಿತ್ರೀಕರಿಸಿದ್ದರು.ಅದೇ ಕಾಲದಲ್ಲಿ ಇಂಗ್ಲೆಂಡಿನಲ್ಲಿ ವಾಸಿಸಿದ ಮ್ಯಾಂಚೆಸ್ಟರ್‌ನ ಕಾರ್ಮಿಕರ ಸ್ಥಿತಿಯನ್ನು ನೇರವಾಗಿ ಕಂಡು ತಿಳಿದುಕೊಂಡ ಫ್ರೆಡರಿಕ್ ಎಂಗೆಲ್ಸ್ ಬರೆದ ‘ದಿ ಕಂಡಿಶನ್ ಆಫ್ ದಿ ವರ್ಕಿಂಗ್ ಕ್ಲಾಸಸ್ ಇನ್ ಇಂಗ್ಲೆಂಡ್’ ಎಂಬ ಪುಸ್ತಕ ಜಗತ್ಪ್ರಸಿದ್ಧವಾಗಿದೆ. ಅದು 19ನೇ ಶತಮಾನದ ಶ್ರೀಮಂತ ಸಮಾಜದ ಹೃದಯ ಹೀನತೆಯ ವಾಸ್ತವ ಸ್ಥಿತಿಯನ್ನು ತೋರಿಸಿದೆ.

 ಆದರೆ ಜಗತ್ತು ಅವೆಲ್ಲವನ್ನು ದಾಟಿ ತುಂಬಾ ಮುಂದಕ್ಕೆ ಸಾಗಿದೆ. ಚಿಕಾಗೋದಲ್ಲಿ ದುಡಿಮೆಯ ವೇಳೆಯನ್ನು 8 ಗಂಟೆಗಳಿಗೆ ನಿಗದಿಪಡಿಸಿ ಕಾನೂನು ಜಾರಿಗೊಳಿಸಬೇಕೆಂದು ಕಾರ್ಮಿಕರು ಹೋರಾಟ ನಡೆಸಿದ್ದರು. ಅಂದು ಹಲವರು ಪೊಲೀಸರ ಗುಂಡೇಟಿನಿಂದ ಪ್ರಾಣ ಕಳೆದುಕೊಂಡರು. ನಂತರ ಅಂತಹ ಸ್ವಾತಂತ್ರ್ಯವನ್ನು ಜಗತ್ತಿನಾದ್ಯಂತ ಅಂಗೀಕರಿಸಲಾಯಿತು. ಸದ್ಯ ಇದು ಜಗತ್ತಿನೆಲ್ಲೆಡೆ ಕಾರ್ಮಿಕರ ಹಕ್ಕುಗಳನ್ನು ಸಂರಕ್ಷಿಸಲ್ಪಡುವ ಕಾಲವಾಗಿದೆ.

 ಇಂಡಿಯಾದಲ್ಲೂ ಇದೇ ರೀತಿಯ ಸ್ಥಿತಿಯಾಗಿತ್ತು. 1936ರಲ್ಲಿ ಬ್ರಿಟಿಷ್ ಆಡಳಿತದಲ್ಲಿ ಟ್ರೇಡ್ ಯೂನಿಯನ್ ಹಕ್ಕನ್ನು ಸರಕಾರವು ಕಾರ್ಮಿಕರಿಗೆ ಅಂಗೀಕರಿಸಿಕೊಟ್ಟಿತು. 1947ರ ಸ್ವಾತಂತ್ರದ ಬೆನ್ನಿಗೇ ಸಂಸ್ಥೆಗಳಲ್ಲಿ ಇರುವ ಕಾರ್ಮಿಕ ಕಾನೂನುಗಳನ್ನು ಜಾರಿಗೆ ತರಲಾಯಿತು. ಮಹಿಳಾ ಕಾರ್ಮಿಕರ ಹೆರಿಗೆಯ ಅವಧಿಯಲ್ಲಿ ಇರುವ ಸೌಕರ್ಯಗಳನ್ನು ಏಳು ದಶಕಗಳಲ್ಲಿ ರಾಷ್ಟ್ರದಲ್ಲಿ ಜಾರಿಯಲ್ಲಿದ್ದ ಹಕ್ಕಾಗಿತ್ತು. ಅವೆಲ್ಲವನ್ನೂ ಒಂದೇ ಏಟಿಗೆ ಒಂದು ಸುಗ್ರೀವಾಜ್ಞೆಯ ಮೂಲಕ ತೊಡೆದು ಹಾಕಲು ಬಿಜೆಪಿ ಆಡಳಿತ ಪ್ರಯತ್ನಿಸುತ್ತಿದೆ.

 ಪ್ರತಿಭಟನೆ ಉರಿಯುತ್ತಿದೆ:

 ಇಂಡಿಯಾದಲ್ಲಿ ಸಾಮಾಜಿಕ ಪ್ರಜ್ಞೆಯಿರುವ ಮಾಲೀಕರು ಕೂಡಾ ಇಂತಹ ಕಾನೂನುಗಳ ವಿರುದ್ಧ ಬೀದಿಗೆ ಬಂದಿದ್ದಾರೆ. ವಿಪ್ರೋ ಸಂಸ್ಥೆಯ ಮಾಲೀಕನಾಗಿರುವ ಅಝೀಂ ಪ್ರೇಮ್ಜಿ ಇಂಡಿಯಾದ ಅತ್ಯಂತ ಜನಪ್ರಿಯ ಶ್ರೀಮಂತ ಉದ್ಯಮಿಯಾಗಿದ್ದಾರೆ. ಸಾವಿರಾರು ಕಾರ್ಮಿಕರು ಅವರ ಸಂಸ್ಥೆಯಲ್ಲಿ ದುಡಿಯುತ್ತಿದ್ದಾರೆ. ಅವರು ಹೇಳುವಂತೆ, ‘‘ಇಂದು ಉದ್ದಿಮೆಯ ಬೆಳವಣಿಗೆಗೆ ಬೇಕಾಗಿರುವುದು, ಈ ರೀತಿಯ ಕಾರ್ಮಿಕ ವಿರೋಧಿ ಕಾನೂನುಗಳಲ್ಲ? ಬದಲಾಗಿ ಇನ್ನಷ್ಟು ಮೂಲಭೂತ ಸೌಕರ್ಯಗಳು, ಠೇವಣಿ ಭದ್ರತೆ ಇವೆಲ್ಲವೂ ಅವರಿಗೆ ಅಗತ್ಯವಿದೆ.  ಆದರೆ ಈ ರೀತಿಯ ಸಾಮಾಜಿಕ ವಿರೋಧಿ ಸೌಕರ್ಯಗಳನ್ನು ಮಾತ್ರ ಅವರಿಗೆ ನೀಡಲಾಗುತ್ತಿದೆ.’’

 ಇಂಡಿಯಾದ ಎಲ್ಲಾ ಕಾರ್ಮಿಕ ಸಂಘಟನೆಗಳು ಈ ವಿಚಾರದಲ್ಲಿ ದೃಢವಾದ ಕ್ರಮಗಳನ್ನು ಸ್ವೀಕರಿಸಿದೆ.  ಅವರು ಸಂಘಟಿತರಾಗಿ ಇದರ ವಿರುದ್ಧ ಆಡಳಿತಕ್ಕೆ ಎಚ್ಚರಿಕೆಯನ್ನು ನೀಡಿದ್ದಾರೆ. ಸಂಘಪರಿವಾರ ಸಂಘಟನೆಯಾದ ಬಿಎಂಎಸ್ ಸಹ ಈ ಕಾನೂನುಗಳು ಹಿತಕಾರಿಯಲ್ಲ, ರಾಷ್ಟ್ರಕ್ಕೆ ಸಮಸ್ಯೆಯನ್ನು ತಂದೊಡ್ಡುತ್ತಿದೆ ಎಂದು ಹೇಳಿದೆ. ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆ ಐಎಲ್‌ಒ ಈ ಕಾನೂನಿಗೆ ದಿಗ್ಭ್ರಮೆ ಪ್ರಕಟಿಸಿ ಇಂಡಿಯಾಗೆ ಪತ್ರ ಬರೆದಿದೆ.

ಇವೆಲ್ಲದರ ಲಾಭ ಏನು? ಈ ದಿನಗಳಲ್ಲಿ ದೇಶದ ಆಡಳಿತಗಾರರ ನೈಜಮುಖ ಬಹಿರಂಗಗೊಳ್ಳುತ್ತಿದೆ. ಅದು ಯಾವತ್ತೂ ಸಂತೋಷವನ್ನು ನೀಡುವ ವಿಚಾರಗಳಲ್ಲ. ಈ ವಿಚಾರಗಳು ಸಮಸ್ಯೆಯನ್ನು ಇನ್ನಷ್ಟು ಸಂಕೀರ್ಣಗೊಳಿಸುವುದೆಂದು ತಿಳಿದುಕೊಂಡು ಕೆಲವೊಂದು ಸರಕಾರಗಳು ಪ್ರಸ್ತುತ ಕಾನೂನುಗಳಿಗೆ ತಿದ್ದುಪಡಿಗಳನ್ನು ತಂದಿದೆ. ಆದರೆ ಸಂಘಪರಿವಾರದ ಹುಟ್ಟು ಗುಣ ಒಂದಿಷ್ಟೂ ವ್ಯತ್ಯಾಸವಿಲ್ಲದೆ ಮುಂದುವರಿದಿದೆ.

Join Whatsapp