ಕನ್ನಡ, ಇಂಗ್ಲಿಷ್ ಭಾಷೆಯ ಮೂಲಕ ಉರ್ದು ಕಲಿಕೆಗೆ ನೆರವಾಗುವ ಪುಸ್ತಕ ಬರೆದ ವಿಜ್ಞಾನಿ

Prasthutha|

ಬೆಂಗಳೂರು ಮೂಲದ ವಿಜ್ಞಾನಿ ಡಾ.ಎಂ.ಎಂ.ಹಫೀಝ್ ಅವರ ಸಾಧನೆ

- Advertisement -

ಬೆಂಗಳೂರು ಮೂಲದ ಮಾಜಿ ವಿಜ್ಞಾನಿ ಡಾ.ಎಂ.ಎಂ.ಹಫೀಝ್ ಅವರ “ಲರ್ನ್ ಉರ್ದು ತ್ರೂ ಇಂಗ್ಲಿಷ್ ಆ್ಯಂಡ್ ಕನ್ನಡ” ಎಂಬ ಪುಸ್ತಕವನ್ನು ಬಿಡುಗಡೆಗೊಳಿಸುವ ಮೂಲಕ ತಮ್ಮ ಜನ್ಮದಿನವನ್ನು ಆಚರಿಸಿದರು.

110 ಪುಟಗಳನ್ನು ಹೊಂದಿರುವ ಈ ಪುಸ್ತಕವು, ಕನ್ನಡ ಮತ್ತು ಇಂಗ್ಲಿಷ್ ಭಾಷೆಯ ಮೂಲಕ ಉರ್ದು ಕಲಿಯಲು ಬಯಸುವವರಿಗೆ ಕಲಿಕೆಯ ಮಾರ್ಗದರ್ಶಿಯಾಗಿದೆ. ಕಲಿಕೆ ಸುಲಭವಾಗಲು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಉರ್ದು ಪದಗಳು, ಪದಗುಚ್ಛಗಳ ಅರ್ಥ ಮತ್ತು ಉಚ್ಛಾರಣೆಯನ್ನು ಪುಸ್ತಕದಲ್ಲಿ ನೀಡಲಾಗಿದೆ.

- Advertisement -

ರಸಾಯನ ಶಾಸ್ತ್ರದಲ್ಲಿ ಡಾಕ್ಟರೇಟ್ ಗಳಿಸಿದ ಇವರು, ಕನ್ನಡ ಮತ್ತು ಉರ್ದು ಭಾಷೆ ಕಲಿಯ ಬಯಸುವವರಿಗೆ ಗೈಡ್ ಅನ್ನು ಸಂಕಲಿಸಲು ಯೋಚಿಸಿದರು. ಲೇಖಕರಿಗೆ ಪುಸ್ತಕವನ್ನು ಸಂಕಲಿಸಲು ಸುಮಾರು 2 ವರ್ಷ ಹಿಡಿದಿದೆ. ಇವರ ಮೊದಲ “ಲರ್ನ್ ಕನ್ನಡ ತ್ರೂ ಇಂಗ್ಲಿಷ್ ಆ್ಯಂಡ್ ಉರ್ದು” ಎಂಬ ಪುಸ್ತಕವನ್ನು ವ್ಯಾಪಕವಾಗಿ ಸ್ವಾಗತಿಸಲಾಗಿದೆ.

ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡದ ನಿವೃತ್ತ ಪ್ರಾಧ್ಯಾಪಕ ಪ್ರೊ.ಕೆ.ಪಿ.ಭಟ್ ಪುಸ್ತಕ ರಚನೆ ಮಾರ್ಗದರ್ಶನ ನೀಡಿದ್ದಾರೆ. ಹಿಂದಿನ ಪುಸ್ತಕವನ್ನು ಖಾಸಗಿ ಪ್ರಕಾಶಕರು ಪ್ರಕಟಿಸಿದರೆ, ಇತ್ತೀಚಿನ ಪುಸ್ತಕವನ್ನು ಕರ್ನಾಟಕ ಉರ್ದು ಅಕಾಡೆಮಿ ಹೊರತಂದಿದೆ.

Join Whatsapp