ಎಸ್.ಡಿ.ಪಿ.ಐ ಹೋರಾಟ ಫಲಶ್ರುತಿ: ದುರಸ್ತಿ ಕಾಮಗಾರಿ ತೊಡಗಿದ ಹೆದ್ದಾರಿ ಪ್ರಾಧಿಕಾರ

Prasthutha|

► ಹತ್ತು ದಿನಗಳ ಗಡುವು ನೀಡಿದ್ದ ಪಕ್ಷ ನಾಯಕರು

- Advertisement -

ಬಂಟ್ವಾಳ : ರಾಷ್ಟ್ರೀಯ ಹೆದ್ದಾರಿಯ ಅವ್ಯವಸ್ಥೆಯನ್ನು ಖಂಡಿಸಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬಂಟ್ವಾಳ ವಿಧಾನಸಭಾ ಕ್ಷೇತ್ರದ ವತಿಯಿಂದ ಮೆಲ್ಕಾರ್ ಮತ್ತು ಕಲ್ಲಡ್ಕಗಳಲ್ಲಿ ನಡೆಸಿದ ಪ್ರತಿಭಟನೆ ಫಲಶ್ರುತಿಯನ್ನು ಕಂಡಿದೆ.

ಹೊಂಡಗಳಿಂದ ಕೂಡಿದ ಸಂಚಾರಕ್ಕೆ ಯೋಗ್ಯವಲ್ಲದ ಬಿ.ಸಿ ರೋಡು -ಅಡ್ಡಹೊಳೆ ರಾಷ್ಟ್ರೀಯ ಹೆದ್ದಾರಿಯ ದುರಸ್ಥಿ ಕಾರ್ಯವನ್ನು  ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ( ಎನ್.ಹೆಚ್.ಎ.ಐ) ಬಿಸಿರೋಡಿನಿಂದ ಆರಂಭಿಸಿದೆ.

- Advertisement -

ರಾಷ್ಟ್ರೀಯ ಹೆದ್ದಾರಿಯ ಅವ್ಯವಸ್ಥೆಯ ವಿರುದ್ಧ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬಂಟ್ವಾಳ ವಿಧಾನಸಭಾ ಕ್ಷೇತ್ರದ ವತಿಯಿಂದ ಪ್ರತಿಭಟನೆ ನಡೆಸಲಾಗಿತ್ತು. ಪ್ರತಿಭಟನಾಕಾರರು ಅಣುಕು ಪ್ರದರ್ಶನ ಮತ್ತು ರಸ್ತೆ ತಡೆಗಳನ್ನು ನಡೆಸಿ ಆಕ್ರೋಷ ವ್ಯಕ್ತಪಡಿಸಿದ್ದರು.

ಮುಂದಿನ ದಿನ 10 ದಿನಗಳೊಳಗಾಗಿ ಹೆದ್ದಾರಿಯನ್ನು ಸರಿಪಡಿಸದಿದ್ದಲ್ಲಿ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಎಲ್ಲಾ ಸಮಾನ ಮನಸ್ಕ ಸಂಘಟನೆ ಮತ್ತು ಪಕ್ಷಗಳನ್ನು ಸೇರಿಸಿ ರಾಸ್ತಾ ರೋಖೋ ನಡೆಸಿ ಪ್ರತಿಭಟಿಸಲಿದ್ದೇವೆ ಎಂದು ಎಸ್.ಡಿ.ಪಿ.ಐ ಎಚ್ಚರಿಸಿತ್ತು.

Join Whatsapp