ಎನ್ ಇಪಿ ನಮ್ಮಲ್ಲೇ ಮೊದಲು ಎಂದ ಡಿಸಿಎಂಗೆ ಮುಖಭಂಗ | ಟ್ವಿಟರ್ ನಲ್ಲಿ #RejectNEP2020 ಟ್ರೆಂಡ್

Prasthutha|

ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿಯವರ ಬಹುನಿರೀಕ್ಷಿತ ರಾಷ್ಟ್ರೀಯ ಶಿಕ್ಷಣ ನೀತಿ(ಎನ್ ಇಪಿ)ಯನ್ನು ಮೊದಲು ಕರ್ನಾಟಕದಲ್ಲೇ ಜಾರಿಗೊಳಿಸುತ್ತೇವೆ ಎಂದು ಡಿಸಿಎಂ ಅಶ್ವಥ್ ನಾರಾಯಣ್ ಘೋಷಿಸಿದ ಬೆನ್ನಲ್ಲೇ, ರಾಜ್ಯದಲ್ಲಿ ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ. ಎನ್ ಇಪಿ ಜಾರಿಗೆ ಆಕ್ಷೇಪಿಸಿ ಸಾವಿರಾರು ವಿದ್ಯಾರ್ಥಿಗಳು, ಹೋರಾಟಗಾರರು ಟ್ವಿಟರ್ ನಲ್ಲಿ ತಮ್ಮ ಆಕ್ರೋಶವನ್ನು ದಾಖಲಿಸಿದ್ದಾರೆ.

- Advertisement -

#RejectNEP2020 ಹ್ಯಾಶ್ ಟ್ಯಾಗ್ ಟ್ವಿಟರ್ ನಲ್ಲಿ ಟ್ರೆಂಡ್ ಆಗಿದೆ.ಶೀಘ್ರದಲ್ಲೇ ದೇಶದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ 2020 ಜಾರಿಗೊಳ್ಳಲಿದೆ. ಈ ಕುರಿತು ಕೇಂದ್ರ ಸರಕಾರ ಈಗಾಗಲೇ ನಿರ್ಧರಿಸಿದ್ದು, ಸಚಿವ ಸಂಪುಟದಲ್ಲಿ ಅನುಮೋದನೆ ಕೂಡ ಪಡೆದಿದೆ.

ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿ ಶೈಕ್ಷಣಿಕ ವಲಯದ ಸರ್ವಾಧಿಕಾರಿಗಳನ್ನು ಕೇಂದ್ರ ಸರಕಾರದ ಕೈಯಲ್ಲಿ ಇಟ್ಟ ಶಿಕ್ಷಣ ನೀತಿ ಇದಾಗಿದೆ. ವೈವಿಧ್ಯತೆಯಲ್ಲಿ ಏಕತೆ ಎಂಬ ಅಂಶವನ್ನು ಕೈಬಿಟ್ಟು, ಹಿಂದಿ ಹೇರಿಕೆ ಮತ್ತು ಸಂಸ್ಕೃತ ಹೇರಿಕೆಗೆ ಅವಕಾಶ ಕೊಟ್ಟ ಶಿಕ್ಷಣ ನೀತಿ ಇದಾಗಿದೆ ಎಂಬ ಆಪಾದನೆಗಳು ಕೇಳಿಬರುತ್ತಿವೆ.

Join Whatsapp