ಆಸ್ಟ್ರೇಲಿಯಾದ ಹೈಕಮಿಷನರ್ ಆರೆಸ್ಸೆಸ್ ಪ್ರಧಾನ ಕಚೇರಿಗೆ ಭೇಟಿ ; ಪ್ರತಿಭಟಿಸಿದ ಕ್ರಿಶ್ಚಿಯನ್ ಸಮುದಾಯ

Prasthutha|

- Advertisement -

ಹೊಸದಿಲ್ಲಿ : ನಾಗ್ಪುರದ ಆರೆಸ್ಸೆಸ್ ಕೇಂದ್ರ ಕಚೇರಿಗೆ ಭೇಟಿ ನೀಡಿದ ಆಸ್ಟ್ರೇಲಿಯಾದ ಹೈಕಮಿಷನರ್ ವಿರುದ್ಧ ದೇಶದ ಪ್ರಮುಖ ಕ್ರಿಶ್ಚಿಯನ್ ನಾಯಕರು ಮತ್ತು ಕಾರ್ಯಕರ್ತರು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಉಗ್ರ ಹಿಂದುತ್ವ ಸಂಘಟನೆಯಾದ ಆರೆಸ್ಸೆಸ್ ನ ಭಾಗವಾದ ಭಜರಂಗದಳವು ತಮ್ಮ ಪ್ರಜೆ ಅಬ್ರಹಾಂ ಸ್ಟೇಯ್ನ್ ಮತ್ತು ಅವರ ಹದಿಹರೆಯದ ಮಕ್ಕಳನ್ನು ಕ್ರೂರವಾಗಿ ಹತ್ಯೆ ಮಾಡಿರುವುದನ್ನು ಆಸ್ಟ್ರೇಲಿಯಾ ಸರ್ಕಾರ ಮರೆತಿದೆಯೇ ಎಂದು ಅವರು ಕೇಳಿದ್ದಾರೆ.

BarryMustResign: ಎಂಬ ಹ್ಯಾಷ್‌ಟ್ಯಾಗ್ ಮೂಲಕ ಪ್ರಮುಖ ಪತ್ರಕರ್ತ ಪೀಟರ್ ಫ್ರೆಡ್ರಿಕ್ ಅವರು ಆರೆಸ್ಸೆಸ್ ಕೇಂದ್ರ ಕಚೇರಿಗೆ ಭೇಟಿ ನೀಡಿದ ಆಸ್ಟ್ರೇಲಿಯಾದ ರಾಜತಾಂತ್ರಿಕ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ನವೆಂಬರ್ 15 ರಂದು ಆಸ್ಟ್ರೇಲಿಯಾದ ಹೈಕಮಿಷನರ್ ಬೇರಿ ಒ ಫೆರೆಲ್ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ಭೇಟಿ ಮಾಡಿದ್ದರು. ಆರೆಸ್ಸೆಸ್ ನ ಕೆಬಿ ಹೆಡ್ಗೆವಾರ್ ಮತ್ತು ಎಂಎಸ್ ಗೋಲ್ವಾಲ್ಕರ್ ಅವರ ಚಿತ್ರದ ಮುಂದೆ ಇಬ್ಬರು ಫೋಟೋಗೆ ಪೋಸ್ ನೀಡಿದ್ದರು.

- Advertisement -

ಕ್ರಿಶ್ಚಿಯನ್ ಆಕ್ಟಿವಿಸ್ಟ್ ಫಾರ್ ಹ್ಯೂಮನ್ ರೈಟ್ಸ್ ನಾಯಕ ಎಸಿ ಮಿಖೆಯಾಲ್ ಕೂಡ ಈ ಭೇಟಿಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಹೈಕಮಿಷನರ್ ಭೇಟಿಯ ವಿರುದ್ಧ ಆಸ್ಟ್ರೇಲಿಯಾದಲ್ಲಿಯೂ ತೀವ್ರ ಪ್ರತಿಭಟನೆಗಳು ನಡೆಯುತ್ತಿದೆ. ಆಸ್ಟ್ರೇಲಿಯಾದ ಮಾಜಿ ಸೆನೆಟರ್ ಲೀ ರಯೆನ್ನನ್ ಈ ಭೇಟಿಯು ದೇಶಕ್ಕೆ ನಾಚಿಕೆಗೇಡು ಎಂದು ಪ್ರತಿಕ್ರಿಯಿಸಿದ್ದಾರೆ.

ಆರೆಸ್ಸೆಸ್ ಹಿಟ್ಲರ್‌ನಿಂದ ಸ್ಫೂರ್ತಿ ಪಡೆದು ಕೋಮುವಾದ ಮತ್ತು ಉಗ್ರ ಹಿಂದುತ್ವವನ್ನು ಪ್ರತಿಪಾದಿಸುತ್ತಿದೆ ಎಂದು 2011 ರಿಂದ 2018 ರವರೆಗೆ ನ್ಯೂ ಸೌತ್ ವೇಲ್ಸ್ ಅನ್ನು ಪ್ರತಿನಿಧಿಸಿದ್ದ ಸೆನೆಟರ್ ರಯೆನ್ನನ್ ಪ್ರತಿಕ್ರಿಯಿಸಿದ್ದಾರೆ. ಆಸ್ಟ್ರೇಲಿಯಾದ ಪತ್ರಕರ್ತರಾದ ಸಿಜೆ ವರ್ಲೆಮನ್ ಮತ್ತು ಪೀಟರ್ ಫೆಡ್ರಿಕ್ ಕೂಡ ಹೈಕಮಿಷನರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Join Whatsapp