October 5, 2020

ಸೈಬರ್ ಕ್ರೈಮ್ ನಲ್ಲಿ ಕರ್ನಾಟಕ ನಂಬರ್ ವನ್

ಹೊಸದಿಲ್ಲಿ: ದೇಶದಲ್ಲಿ ಸೈಬರ್ ಕ್ರೈಮ್ ಪ್ರಕರಣಗಳಲ್ಲಿ 63.48% ಹೆಚ್ಚಳ ಕಂಡಿದ್ದು, ಅತ್ಯಧಿಕ ಸೈಬರ್ ಕ್ರೈಮ್ ಪ್ರಕರಣಗಳನ್ನು ದಾಖಲಿಸುವುದರೊಂದಿಗೆ ಕರ್ನಾಟಕ ಉತ್ತರ ಪ್ರದೇಶವನ್ನು ದಾಟಿದೆ.

ಸಂಚುಕೋರರನ್ನು ಶಿಕ್ಷಿಸುವುದರಲ್ಲೂ ಕರ್ನಾಟಕ ಮತ್ತೊಮ್ಮೆ ಪ್ರಮಾದವೆಸಗುತ್ತದೆ. ರಾಜ್ಯವು 9 ಪ್ರಕರಣಗಳಲ್ಲಿ 10 ಮಂದಿಯನ್ನು ಮಾತ್ರವೇ ಜೈಲಿಗೆ ಕಳಿಸುವಲ್ಲಿ ಯಶಸ್ವಿಯಾಗಿದ್ದು, 26 ಪ್ರಕರಣಗಳಲ್ಲಿ 31 ಮಂದಿ ಖುಲಾಸೆಗೊಂಡಿದ್ದಾರೆ.
ಕಳೆದ ವರ್ಷ ದೇಶದಾದ್ಯಂತ 44,456 ಸೈಬರ್ ಕ್ರೈಮ್ ಪ್ರಕರಣಗಳು ದಾಖಲಾಗಿದ್ದು, ಅವುಗಳಲ್ಲಿ 12,020 ಪ್ರಕರಣಗಳು ಕರ್ನಾಟಕವೊಂದರಲ್ಲೇ ದಾಖಲಾಗಿದೆ. ಉತ್ತರ ಪ್ರದೇಶ (11,416) ಮತ್ತು ಮಹಾರಾಷ್ಟ್ರ (3,604) ನಂತರದ ಸ್ಥಾನಗಳಲ್ಲಿವೆ.

ಟಾಪ್ ಸುದ್ದಿಗಳು