November 5, 2020

ಸೈನ್ಯದ ನಿವೃತ್ತಿ ವಯಸ್ಸನ್ನು ಹೆಚ್ಚಿಸುವ ಯೋಜನೆಯ ಸುಳಿವು ನೀಡಿದ ಸೇನಾ ಮುಖ್ಯಸ್ಥ

ಹೊಸದಿಲ್ಲಿ : ಸೇನೆಯಲ್ಲಿ ನಿವೃತ್ತಿ ವಯಸ್ಸನ್ನು ಹೆಚ್ಚಿಸುವ ಪ್ರಸ್ತಾಪವನ್ನು ಪರಿಗಣಿಸಲಾಗುತ್ತಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೇಳಿದ್ದಾರೆ. “ಮೂರು ಪಡೆಗಳಲ್ಲಿನ ಸೈನಿಕರು ಮತ್ತು ಅಧಿಕಾರಿಗಳ ನಿವೃತ್ತಿ ವಯಸ್ಸನ್ನು ಹೆಚ್ಚಿಸುವ ಯೋಜನೆ ಇದೆ. ಚಿಕ್ಕ ವಯಸ್ಸಿನಲ್ಲಿ ನಿವೃತ್ತಿಯಿಂದಾಗಿ ಸೈನಿಕರು ಬಹಳ ಕಷ್ಟವನ್ನು ಎದುರಿಸುತ್ತಿದ್ದಾರೆ ಮತ್ತು ಸೈನ್ಯದಲ್ಲಿ ಕರ್ನಲ್ ಆಗಿರುವವರು ಹೊರಗೆ ಹೋಗಿ ಕೆಳ ಹುದ್ದೆಗಳಲ್ಲಿ ಕೆಲಸ ಮಾಡಬೇಕಾಗಿ ಬರುತ್ತದೆ” ಎಂದು ಹೇಳಿದ್ದಾರೆ.

ಹಿರಿಯರನ್ನು ಹೊರಗಿಡುವುದಕ್ಕಿಂತ ಅಂತಹಾ ವ್ಯಕ್ತಿಗಳನ್ನು ನೇಮಿಸಬಹುದಾದ ಹುದ್ದೆಗಳಿಗೆ ವರ್ಗಾಯಿಸುವ ಯೋಜನೆಯೂ ಇದೆ. ಇದು ಪಿಂಚಣಿ ವೆಚ್ಚವನ್ನೂ ಕಡಿಮೆ ಮಾಡುತ್ತದೆ ಎಂದು ರಾವತ್ ಹೇಳಿದ್ದಾರೆ.
ಟಾಪ್ ಸುದ್ದಿಗಳು

ವಿಶೇಷ ವರದಿ