November 13, 2020

ಬೆದರಿಕೆಯ ಮೂಲಕ ನಿರ್ಮೂಲನೆ ಮಾಡಲು ಸಾಧ್ಯವಿಲ್ಲ : ಡಾ| ಕಫೀಲ್ ಖಾನ್

ಮುಖ್ಯಮಂತ್ರಿ ಆದಿತ್ಯನಾಥ್ ಅವರು ಭಯದಿಂದ ನಮ್ಮನ್ನು ಭೇಟೆಯಾಡುತ್ತಿದ್ದಾರೆ. ನಮ್ಮನ್ನು ಬೆದರಿಸಿ ನಿರ್ಮೂಲನೆ ಮಾಡಬಹುದು ಎಂದು ನೀವು ಭಾವಿಸುವುದಾದರೆ ಅದು ತಪ್ಪು ಎಂದು ಡಾ| ಕಫೀಲ್ ಖಾನ್ ಹೇಳಿದ್ದಾರೆ. ಡಾ| ಕಫೀಲ್ ಖಾನ್ ಅವರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಈ ಹಿಂದೆ ಉತ್ತರಪ್ರದೇಶ ಸರಕಾರ ಬಂಧಿಸಿತ್ತು.

ಎನ್ಎಸ್ಎ ಆರೋಪದ ಹಿನ್ನೆಲೆಯಲ್ಲಿ ತಿಂಗಳುಗಟ್ಟಲೆ ಜೈಲಿನಲ್ಲಿದ್ದ ಕಫೀಲ್ ಖಾನ್ ಎರಡು ತಿಂಗಳ ಹಿಂದೆ ಜೈಲಿನಿಂದ ಬಿಡುಗಡೆಯಾಗಿದ್ದರು. “ನಾನು ಜೈಲಿನಲ್ಲಿ ನಿರಂತರ ಚಿತ್ರಹಿಂಸೆಗಳನ್ನು ಅನುಭವಿಸಿದ್ದೇನೆ. ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಯದಿಂದ ನನ್ನನ್ನು ಭೇಟೆಯಾಡುತ್ತಿದ್ದಾರೆ. ನಾನು ಅನ್ಯಾಯದ ವಿರುದ್ಧ ಮಾತನಾಡುವುದನ್ನು ನಿಲ್ಲಿಸಲಾರೆ. ಗೋರಖ್ ಪುರದಲ್ಲಿ ಶಿಶುವಿನ ಸಾವಿಗೆ ಸರಕಾರದ ಕಾರಣವಾಗಿದೆ. ಘಟನೆ ನಡೆದು ಮೂರು ವರ್ಷಗಳಾದರೂ ಸರಕಾರ ನನಗೆ ಕಿರುಕುಳ ನೀಡುತ್ತಿದೆ.” ಎಂದು ಕಫೀಲ್ ಖಾನ್ ಹೇಳಿದ್ದಾರೆ.




ಟಾಪ್ ಸುದ್ದಿಗಳು