September 29, 2020

ಕುವೈಟ್ ಅಮೀರ್ ನಿಧನ

ಕುವೈಟ್ ನ ಅಮೀರ್ 91ರ ಹರೆಯದ ಅಮೀರ್ ಸಬಾಹ್ ಅಲ್ ಅಹ್ಮದ್ ಅಲ್ ಜಾಬಿರ್ ಅಲ್ ಸಬಾಹ್ ರವರು ಮಂಗಳವಾರದಂದು ಅಮೆರಿಕಾದಲ್ಲಿ ನಿಧನರಾಗಿದ್ದಾರೆ.

‍”ಕುವೈಟ್ ರಾಜ್ಯದ ಅಮೀರ್ ಆಗಿರುವ ಶೇಖ್ ಸಬಾಹ್ ಅಲ್ ಅಹ್ಮದ್ ಅಲ್ ಜಾಬಿ ಅಲ್ ಸಬಾಹ್ ಅಗಲುವಿಕೆಯ ಶೋಕವನ್ನು ನಾವು ತೀವ್ರ ಬೇಸರ ಮತ್ತು ದು:ಖದೊಂದಿಗೆ ಆಚರಿಸುತ್ತೇವೆ” ಎಂದು  ರೋಯಲ್ ಅಫೈರ್ಸ್ ನ ಉಸ್ತುವಾರಿ ಸಚಿವ ಶೇಖ್ ಅಲಿ  ಜರಾ ಅಲ್ ಸಬಾಹ್ ತಿಳಿಸಿದ್ದಾರೆ.




1929ರಲ್ಲಿ ಜನಿಸಿದ ಶೇಖ್ ಸಬಾಹ್, ಆಧುನಿಕ ಕುವೈಟ್ ನ ವಿದೇಶಿ ನೀತಿಯ ವಾಸ್ತುಶಿಲ್ಪಿ ಎಂಬುದಾಗಿ ಕರೆಯಲಾಗುತ್ತಿತ್ತು. ಅವರು 1963ರಿಂದ 2003ರ ತನಕ ಸುಮಾರು 40 ವರ್ಷಗಳ ಕಾಲ ವಿದೇಶ ಸಚಿವರಾಗಿ ಅವರು ಸೇವೆ ಸಲ್ಲಿಸಿದ್ದರು.

ಶೇಖ್ ಜಾಬಿರ್ ಅಲ್ ಸಬಾಹ್ ರ ಮರಣದ ಬಳಿಕ 2006ರಲ್ಲಿ ಅವರು ಕುವೈಟ್ ಅಮೀರ್ ಆಗಿ ಆಯ್ಕೆಯಾಗಿದ್ದರು.

ಟಾಪ್ ಸುದ್ದಿಗಳು